COVAXIN: ಕೋವ್ಯಾಕ್ಸಿನ್ ಸುರಕ್ಷಿತ – ಭಾರತ್ ಬಯೋಟೆಕ್ ಕಂಪನಿ

Share the Article

COVAXIN: ‘ಕೋವಿಶೀಲ್ಡ್’ ಲಸಿಕೆಯಿಂದ ಕೆಲವೊಂದು ಪ್ರಕರಣದಲ್ಲಿ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಆತಂಕಕಾರಿ ವರದಿಯ ಬೆನ್ನಿಗೆ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ಕೋವ್ಯಾಕ್ಸಿನ್’ ಲಸಿಕೆಯು ಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ: CAA: ಮೇ ತಿಂಗಳಿನಿಂದ ಸಿಎಎ ಪೌರತ್ವ ಗ್ಯಾರಂಟಿ

“ಕೋವ್ಯಾಕ್ಸಿನ್ ಲಸಿಕೆಯನ್ನು ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ,” ಎಂದು ಕಂಪನಿ ಹೇಳಿದೆ. ಲಸಿಕೆ ಅಭಿವೃದ್ಧಿಗೊಳಿಸುವಾಗ ಸಾಕಷ್ಟು ಪ್ರಯೋಗ ನಡೆಸಲಾಗಿದೆ. ಪರಿಣಾಮಕಾರಿ ಪರೀಕ್ಷೆ ಕೈಗೊಳ್ಳಲಾಗಿದೆ. ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕಾರ್ಯಕ್ರಮದ ಭಾಗವಾಗಿ ಲಸಿಕೆ ರೂಪಿಸಲಾಗಿದೆ ಎಂದು ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Driving Licence: ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ RTO ಎದುರು ಕ್ಯೂ ನಿಲ್ಲಬೇಕಿಲ್ಲ – ಬಂತು ಹೊಸ ನಿಯಮ !!

27 ಸಾವಿರ ವಿಷಯ ಮೌಲ್ಯಮಾಪನ: ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿ, ಪರವಾನಗಿ ಪಡೆಯುವ ಭಾಗವಾಗಿ 27 ಸಾವಿರ ವಿಷಯ ಮೌಲ್ಯಮಾಪನ ಮಾಡಲಾಗಿದೆ. ಸಮರ್ಪಕ ಹಾಗೂ ನಿರ್ಬಂಧಿತ ಮಾದರಿಯ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಜೀವರಕ್ಷಕ ಔಷಧಿ ಉತ್ಪಾದನೆಗೆ ಸಾವಿರಾರು ವಿಷಯಗಳನ್ನು ಅಧ್ಯಯನ ಮಾಡಿ, ಸುರಕ್ಷತಾ ನಿಯಮಗಳಡಿ ಲಸಿಕೆ ಅಭಿವೃದ್ಧಿ ಮಾಡಲಾಗಿದೆ ಎಂದು ಹೈದರಾಬಾದ್ ಮೂಲದ ಫಾರ್ಮಾ ಕಂಪನಿ ಹೇಳಿಕೊಂಡಿದೆ.

‘ಕೋವ್ಯಾಕ್ಸಿನ್ ‘ ಸುರಕ್ಷತೆ ಬಗ್ಗೆ ಕೇಂದ್ರದ ಆರೋಗ್ಯ ಸಚಿವಾಲಯ ಮೌಲ್ಯಮಾಪನ ಮಾಡಿದೆ. ಫಾರ್ಮಾಕೊ ವಿಜಿಲೆನ್ಸ್ ಅಡಿಯಲ್ಲಿ ಸುರಕ್ಷತೆಯ ಮಾನದಂಡಗಳ ಬಗ್ಗೆ ಮೇಲ್ವಿಚಾರಣೆ ನಡೆಸಲಾಗಿದೆ ಎಂದು ಕಂಪನಿ ಹೇಳಿದೆ.

Leave A Reply