Uppinangady: ಸೈಕಲ್‌ ರಿಪೇರಿ ವಿಷಯದಲ್ಲಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Share the Article

Uppinangady: ಖಾಸಗಿ ಶಾಲೆಯ 8ನೇ ತರಗತಿಗೆ ಹೋಗಲಿದ್ದ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Eagle Playing Badminton: ಹದ್ದು ಬ್ಯಾಡ್ಮಿಂಟನ್‌ ಆಡವುದನ್ನು ಕಂಡಿದ್ದೀರಾ? ಇಲ್ಲಿದೆ ವೈರಲ್‌ ವೀಡಿಯೋ

ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್‌ (13) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಉಪ್ಪಿನಂಗಡಿ ಶಾಲೆಯಲ್ಲಿ ಈತ ಕಲಿಯುತ್ತಿದ್ದ. ಶುಕ್ರವಾರ ತನ್ನ ಸೈಕಲ್‌ ರಿಪೇರಿ ಮಾಡಲು ಮನೆಯಲ್ಲಿ ಒತ್ತಾಯ ಮಾಡಿದ್ದು, ನಂತರ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: Belthangady: ಪೊಲೀಸ್‌ ವ್ಯಾನ್‌ಗೆ ಇನೋವಾ ಕಾರು ಡಿಕ್ಕಿ; ಮಗುಚಿ ಬಿದ್ದ ಪೊಲೀಸ್‌ ಗಾಡಿ

ಕೆಟ್ಟುಹೋಗಿದ್ದ ಸೈಕಲ್‌ ರಿಪೇರಿ ಮಾಡಿಕೊಡಬೇಕೆಂದು ತನ್ನ ಮನೆಯಲ್ಲಿ ಹೇಳಿದ್ದ. ಆದರೆ ಮನೆಯವರು ಇನ್ವರ್ಟರ್‌ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್‌ ರಿಪೇರಿ ಮಾಡಿಕೊಡಲಾಗುವುದೆಂದು ಹೇಳಿದ್ದರು. ಇದರಿಂದ ಮನನೊಂದು ಈತ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.