Udupi: ಟಿಪ್ಪರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತ; ಬೈಕ್‌ ಸವಾರ ಸಾವು

Udupi: ಟಿಪ್ಪರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಈ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆಯೊಂದು ಶುಕ್ರವಾರ ಉಡುಪಿಯ ಅಂಬಾಗಿಲು-ಉಡುಪಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಟಿಪ್ಪರ್‌ ನ ಅಡಿಭಾಗದಲ್ಲಿ ಬೈಕ್‌ ಬಿದ್ದಿದೆ.

ಇದನ್ನೂ ಓದಿ: Gadaga: ಮಧ್ಯರಾತ್ರಿ ನಾಲ್ವರ ಭೀಕರ ಕೊಲೆ ಪ್ರಕರಣ; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೇ ಬಂದಿದ್ದಾರೆ-ಐಜಿಪಿ ಹೇಳಿಕೆ

ಮೃತ ಬೈಕ್‌ ಸವಾರನನ್ನು ಬ್ರಹ್ಮಾವರದ ಮಟಪಾಡಿ ಮೂಲದ ಪ್ರಭಾಕರ ಆಚಾರಿ ಎಂದು ಗುರುತಿಸಲಾಗಿದೆ. ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆಗೆ ಬರುತ್ತಿದ್ದರು. ಬೈಕ್‌ನಲ್ಲಿದ್ದ ಸಹಸವಾರ ಕೂಡಾ ತೀವ್ರ ಗಾಯಗೊಂಡಿದ್ದಾರೆ. ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Hanuman Jayanti: ಈ ದಿನದಂದು ಮನೆಗೆ ಇಂತಹ ವಸ್ತುಗಳನ್ನು ತನ್ನಿ, ಅದೃಷ್ಟ ಹುಡುಕಿಕೊಂಡು ಬರುತ್ತೆ!

Leave A Reply

Your email address will not be published.