Gadaga: ಮಧ್ಯರಾತ್ರಿ ನಾಲ್ವರ ಭೀಕರ ಕೊಲೆ ಪ್ರಕರಣ; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೇ ಬಂದಿದ್ದಾರೆ-ಐಜಿಪಿ ಹೇಳಿಕೆ

Gadaga: ನಗರದ ದಾಸರ ಓಣಿಯಲ್ಲಿ ನಾಲ್ವರ ಭೀಕರ ಹತ್ಯೆ ನಡೆದಿದ್ದು, ಇದೀಗ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Roopa Rayappa: ಬ್ಲೌಸ್ ಇಲ್ಲದೆ ಫೋಟೋ ತೆಗೆಸಿದ KGF ನಟಿ !!

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಗೆ ಭೆಟಿ ನೀಡಿದ ಐಜಿಪಿ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ದುಷ್ಕರ್ಮಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ವಿಭಿನ್ನ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Chitradurga: ನೈತಿಕ ಪೊಲೀಸ್‌ಗಿರಿ; ಮುಸ್ಲಿಂ ಯುವತಿಗೆ ಡ್ರಾಪ್‌ ನೀಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ ನಡೆಸಿದ ಮುಸ್ಲಿಮರು

ಕೊಲೆ ನಡೆದಿರುವುದನ್ನು ಗಮನಿಸಿದರೆ ಇದು ಕೊಲೆ, ಕಳ್ಳತನ, ದರೋಡೆಗೆ ಬಂಂದವರಲ್ಲ. ಕೊಲೆ ಮಾಡೋ ಉದ್ದೇಶದಿಂದಲೇ ಬಂದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಧ್ಯರಾತ್ರಿ ಗಾಢ ನಿದ್ರೆಯ ಸಮಯದಲ್ಲಿ ಕೂಗಾಟ ಕೇಳಿ ಬಂದಿರದ ಸಾಧ್ಯತೆ ಇಲ್ಲ. ತನಿಖೆ ನಂತರ ಕೊಲೆಗೆ ನಿಖರವಾದ ಕಾರಣವೇನೆಂದು ತಿಳಿದು ಬರಲಿದೆ. ಆರೋಪಿಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.

Leave A Reply

Your email address will not be published.