Kalaburgai: ಬಾತ್‌ರೂಂನಲ್ಲಿದ್ದ ಮಹಿಳೆಯ ವಿಡಿಯೋ ಮಾಡಿದ ಸೆಕ್ಯೂರಿಟಿ ಗಾರ್ಡ್ – ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯರು !!

Share the Article

 

Kalaburagi: ಮಹಿಳೆಯೋರ್ವಳು ಬಾತ್‌ ರೂಮ್‌ನಲ್ಲಿದ್ದ ವೇಳೆ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್‌ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಘಟನೆ ಕಲಬುರಗಿ ಪಟ್ಟಣದಲ್ಲಿ ನಡೆದಿದೆ.

ಕಲಬುರಗಿ(Kalaburagi) ನಗರದ ರಾಮಮಂದಿರ ವೃತ್ತದ ಬಳಿಯಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಿಶ್ವನಾಥ್ ಎಂಬಾತ ಸೆಕ್ಯೂರಿಟಿ ಗಾರ್ಡ್(Security gard) ಆಗಿ ಕೆಲಸ ಮಾಡುತ್ತಿದ್ದ. ಅದೇ ಅಪಾರ್ಟ್ಮೆಂಟ್ನಲ್ಲಿ ಕುಟುಂಬವೊಂದು ಬಾಡಿಗೆ ಇದೆ. ಈ ಕುಟುಂಬದ ಮಹಿಳೆ ಬಾತ್ ರೂಮ್‌ಗೆ ಹೋಗಿದ್ದನ್ನ ಗಮನಿಸಿದ್ದ ಆರೋಪಿ ವಿಶ್ವನಾಥ್ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ. ಇದನ್ನ ಗಮನಿಸಿದ ಮಹಿಳೆ ಆಘಾತಗೊಂಡಿದ್ದಾಳೆ

ಬಳಿಕ ಮಹಿಳೆಯು ತಕ್ಷಣ ಎಚ್ಚೆತ್ತು ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಮಹಿಳೆಯ ಪತಿ ಸೆಕ್ಯೂರಿಟಿ ಗಾರ್ಡ್‌ನನ್ನು ಹಿಡಿದು ಅಪಾರ್ಟ್‌ಮೆಂಟ್ ಅಂಡರ್‌ಗ್ರೌಂಡ್‌ನಲ್ಲಿರುವ ಕಂಬಕ್ಕೆ ಕಟ್ಟಿಹಾಕಿದ್ದಾನೆ. ಈ ವೇಳೆಗೆ ಸ್ಥಳೀಯರು ಕೂಡ ಸ್ಥಳದಲ್ಲಿ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ. ಪ್ರಕರಣ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave A Reply