Health Drinks: Bournvita ಪ್ಯಾಕ್‌ ಮೇಲೆ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದು ಹಾಕಲು ಕೇಂದ್ರದಿಂದ ಸೂಚನೆ

Share the Article

Health Drinks: ಬೋರ್ನ್‌ವಿಟಾ ಸೇರಿ ಎಲ್ಲಾ ಪಾನೀಯಗಳ ಪ್ಯಾಕೆಟ್‌ ಮೇಲೆ ನಮೂದಿಸಿರುವ ಹೆಲ್ತ್‌ ಡ್ರಿಂಕ್ಸ್‌ ಎಂಬ ಪದವನ್ನು ತೆಗೆದು ಹಾಕಲು ವಾಣಿಜ್ಯ ಕಂಪನಿಗಳಿಗೆ ಕೇಂದ್ರ ಸರಕಾರ ಆದೇಶ ನೀಡಿರುವುದಾಗಿ ವರದಿಯಾಗಿದೆ.

ಎಪ್ರಿಲ್‌ 10 ರಂದು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಹೆಲ್ತ್‌ ಡ್ರಿಂಕ್ಸ್‌ ಎಂದು ವ್ಯಾಖ್ಯಾನಿಸುವಂತಿಲ್ಲ ಎಂದು ಹೇಳಲಾಗಿದೆ.

ಸಕ್ಕರೆಯ ಅಂಶ ಬೋರ್ನ್‌ವಿಟಾದಲ್ಲಿ ಮಿತಿಗಿಂತ ಹೆಚ್ಚಿರುವುದುನ್ನು ಎನ್‌ಸಿಪಿಸಿಆರ್‌ ತನಿಖೆಯನ್ನು ಪತ್ತೆ ಮಾಡಿದ್ದು, ಇದಕ್ಕೂ ಮೊದಲು ಸುರಕ್ಷತಾ ಮಾನದಂಡ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಹಾಗೂ ಆರೋಗ್ಯ ಪಾನೀಯ ಎಂದು ಹೇಳುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಎನ್‌ಸಿಪಿಸಿಆರ್‌ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಜಿರಳೆಗಳನ್ನು ಕೊಲ್ಲುವ ಅತ್ಯುತ್ತಮ ಮನೆಮದ್ದು ಇಲ್ಲಿದೆ ನೋಡಿ

ಹೆಲ್ತ್‌ ಡ್ರಿಂಕ್‌ ಎಂದು ಪ್ರಾಧಿಕಾರದ ಅನುಸಾರ ದೇಶದ ಆಹಾರ ಕಾನೂನಿಯ ಅನ್ವಯ ನಮೂದಿಸುವುದು ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಪ್ರಕಾರ ಹೆಲ್ತ್‌ ಡ್ರಿಂಕ್ಸ್‌ ಎಂದು ವಾಣಿಜ್ಯ ಕಂಪನಿಗಳು ಡೈರಿ ಆಧಾರಿತ ಪಾನೀಯಗಳ ಪ್ಯಾಕೇಟ್‌ ಮೇಲೆ ನಮೂದಿಸಬಾರದು ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನಿರೀಲ್ಲ, ಇನ್ಮುಂದೆ ಗಂಡ-ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ! ಪಾಲಿಕೆ ಆದೇಶ

Leave A Reply

Your email address will not be published.