PM Surya Ghar Scheme: 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಹೀಗೆ ಅಪ್ಲೈ ಮಾಡಿ !

PM Surya Ghar Scheme: ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಪಿಎಂ ಸೂರ್ಯ ಘರ್: (PM Surya Ghar Scheme) ಮುಫ್ತ್ ಬಿಜಲಿ ಯೋಜನೆಯ ಮೂಲಕ ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳನ್ನು ಅಳವಡಿಸಲಾಗುವುದು ಎಂದು ಮಂಗಳವಾರ ಅವರು ಘೋಷಿಸಿದ್ದಾರೆ. ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನವನ್ನು ನೀಡುತ್ತದೆ. ಈ ಹಿಂದೆ ನೀಡಿದ್ದ ಶೇ.40 ರಷ್ಟು ಸಬ್ಸಿಡಿಯನ್ನ ಈಗ ಶೇ.60 ಕ್ಕೆ ಹೆಚ್ಚಿಸಲಾಗಿದೆ. ಉಳಿದ 40 ಪ್ರತಿಶತ ಮೊತ್ತವನ್ನು ಜನರು ಸಾಲ ರೂಪದಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ: Bengaluru Murder: ತಲೆದಿಂಬಿನಿಂದ ಉಸಿರುಗಟ್ಟಿಸಿ ತನ್ನ ಸ್ವಂತ ಮಕ್ಕಳನ್ನೇ ಕೊಲೆಗೈದ ಪಾಪಿ ತಾಯಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಇತ್ತೀಚಿನ ಬಜೆಟ್‌ನಲ್ಲಿ ರೂಫ್‌ಟಾಪ್ ಸೋಲಾರ್ ಪ್ಯಾನಲ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಮೂಲಕ ಕೋಟ್ಯಾಂತರ ಜನರಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಪ್ರಧಾನ ಮಂತ್ರಿ ಸೂರ್ಯೋ ಘರ್ ಯೋಜನೆಯಡಿ ಈ ಪ್ರಯೋಜನ ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈ ಯೋಜನೆಯ ಮೂಲಕ ಜನರು ತಮ್ಮ ಮೇಲ್ಛಾವಣಿಯಲ್ಲಿ ಒಂದು ರೂಪಾಯಿ ಖರ್ಚು ಮಾಡದೆ ವಿದ್ಯುತ್ ಉತ್ಪಾದಿಸಬಹುದು. ಆರ್ಥಿಕವಾಗಿ ಹಿಂದುಳಿದ ಜನರು ಪಿಎಂಎಸ್‌ವೈ ಯೋಜನೆಯ ಮೂಲಕ ಗರಿಷ್ಠ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.

ಇದನ್ನೂ ಓದಿ: Health Insurance ತೆಗೆದುಕೊಳ್ಳುವವರಿಗೆ ಎಚ್ಚರ! ಈ ತಪ್ಪುಗಳನ್ನು ಮಾಡಲೇ ಬೇಡಿ

ಈ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಿಗೆ ತಮ್ಮ ಪ್ರದೇಶದಲ್ಲಿ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು. ಜೊತೆಗೆ ಈ ಯೋಜನೆಯು ಆದಾಯವನ್ನು ಹೆಚ್ಚಿಸುವ, ವಿದ್ಯುತ್‌ ಬಿಲ್‌ ಅನ್ನು ಕಡಿಮೆ ಮಾಡುವ ಮತ್ತು ಉದ್ಯೋಗಾಕಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.

*ಸಬ್ಸಿಡಿ ಎಷ್ಟು ಸಿಗಲಿದೆ?*

ಕೇಂದ್ರ ಸರ್ಕಾರ ಮೂರು ರೀತಿಯ ಸಬ್ಸಿಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದೆ.

150 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 30 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.

150 ರಿಂದ 300 ಯೂನಿಟ್‌ವರೆಗೂ ವಿದ್ಯುತ್‌ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 60 ಸಾವಿರ ರೂ.ನಿಂದ 78 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.

300 ಯೂನಿಟ್‌ಗೂ ಹೆಚ್ಚು ವಿದ್ಯುತ್‌ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿಲೋ ವ್ಯಾಟ್‌ ಘಟಕ ಅಗತ್ಯ ಇದೆ. ಅದಕ್ಕಾಗಿ 78 ಸಾವಿರ ರೂ. ಸಬ್ಸಿಡಿ ಸಿಗಲಿದೆ.

ಪಿಎಂ ಸೂರ್ಯ ಘರ್ : ಮುಫ್ತ್ ಬಿಜ್ಲಿ ಯೋಜನೆಗೆ http://pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.

*ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?*

*ಹಂತ – 1 : ಈ ಹಂತದಲ್ಲಿ ಕೆಳಗಿನ ಅಂಶಗಳನ್ನು ನಮೂದಿಸಿ*

ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ವಿದ್ಯುತ್‌ ಸರಬರಾಜು ಕಂಪನಿ ಆಯ್ಕೆ ಮಾಡಿಕೊಳ್ಳಿ

ನಿಮ್ಮ ವಿದ್ಯುತ್‌ ಗ್ರಾಹಕರ ಸಂಖ್ಯೆಯನ್ನು ನಮೂದಿಸಿ

ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ

ನಿಮ್ಮ ಇಮೇಲ್‌ ಅನ್ನು ಹಾಕಿ

ಬಳಿಕ ಪೋರ್ಟಲ್‌ನಲ್ಲಿ ತಿಳಿಸಿದಂತೆ ಮುಂದುವರಿಯಿರಿ.

*ಹಂತ – 2:*

ನಿಮ್ಮ ವಿದ್ಯುತ್‌ ಬಿಲ್‌ ಗ್ರಾಹಕರ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ

ಬಳಿಕ ಸೋಲಾರ್‌ ರೂಫ್‌ಟಾಫ್‌ ಫಾರ್ಮ್‌ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ

*ಹಂತ – 3:*

ನಿಮ್ಮ ಅರ್ಜಿಯನ್ನು ನಿಮ್ಮ ಎಸ್ಕಾಂ ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೂ ಕಾಯಿರಿ. ಅನುಮೋದನೆ ಸಿಕ್ಕ ಬಳಿಕ ಎಸ್ಕಾಂನಿಂದ ಅನುಮೋದಿಸಲ್ಪಟ್ಟ ನೋಂದಾಯಿತ ವೆಂಡರ್‌ಗಳು ಸೋಲಾರ್‌ ಅನ್ನು ಇನ್‌ಸ್ಟಾಲ್‌ ಮಾಡಲಿದ್ದಾರೆ.

*ಹಂತ – 4:*

ಸೋಲಾರ್‌ ರೂಪ್‌ಟಾಪ್‌ ಇನ್‌ಸ್ಟಾಲ್‌ ಆದ ಬಳಿಕ, ನಿಮ್ಮ ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್‌ ಮೀಟರ್‌ಗೆ ಅರ್ಜಿ ಸಲ್ಲಿಸಿ.

*ಹಂತ – 5:*

ನೆಟ್‌ ಮೀಟರ್‌ ಅಳವಡಿಕೆ ಮತ್ತು ನಿಮ್ಮ ಹತ್ತಿರದ ಎಸ್ಕಾಂ ಪರಿಶೀಲಿಸಿದ ಬಳಿಕ ಪೋರ್ಟಾಲ್‌ನಲ್ಲಿ ಕಮಿಷನಿಂಗ್‌ ಪ್ರಮಾಣ ಪತ್ರ ಸೃಷ್ಟಿಯಾಗಲಿದೆ.

*ಹಂತ – 6:*

ಒಂದು ಸಲ ಕಮಿಷನಿಂಗ್‌ ಪ್ರಮಾಣ ಪತ್ರ ಪಡೆದ ಮೇಲೆ ಪೋರ್ಟಾಲ್‌ನಲ್ಲಿ ಬ್ಯಾಂಕ್‌ ಖಾತೆಯ ವಿವರಗಳು ಮತ್ತು ರದ್ಧುಪಡಿಸಿದ ಚೆಕ್‌ ಅನ್ನು ಅಪ್‌ಲೋಡ್‌ ಮಾಡಿ. ಅದಾಗಿ 30 ದಿನಗಳ ಒಳಗೆ ನಿಮ್ಮ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ಬರಲಿದೆ.

1 Comment
  1. […] ಇದನ್ನೂ ಓದಿ: PM Surya Ghar Scheme: 300 ಯೂನಿಟ್‌ವರೆಗೆ ಉಚಿತ ವಿದ್ಯುತ್… […]

Leave A Reply

Your email address will not be published.