Parliment Election : ದಕ್ಷಿಣ ಕನ್ನಡ ಲೋಕಸಭಾ: ನಾಮಪತ್ರ ಹಿಂಪಡೆದ ಅಭ್ಯರ್ಥಿ !!

Parliment Election: ರಾಜ್ಯದಲ್ಲಿ ಲೋಕಸಭಾ ಚುನಾವಣೆ(Parliament Election)ಕಾವು ಕಾವೇರಿದೆ. ನಾಮಪತ್ರಗಳ ಸ್ವೀಕೃತಿ ಹಾಗೂ ತಿರಸ್ಕೃತ ಕಾರ್ಯಗಳು ಕೂಡ ಮುಗಿದು ಹೋಗಿವೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾದ ದಕ್ಷಿಣ ಕನ್ನಡ ದಲ್ಲಿ ಈ ಸಲ ಟಫ್ ಫೈಟ್ ನಡೆಯಲಿದೆ. ಬಿಜೆಪಿ(BJP) ಹಾಗೂ ಕಾಂಗ್ರೆಸ್ ನಿಂದ ಪ್ರಬಲ ನಾಯಕರೇ ಕಣಕ್ಕಿಳಿದಿದ್ದಾರೆ. ಆದರೆ ಈ ನಡುವೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಒಬ್ಬರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: Pigmentation: ಪಿಗ್ಮೆಂಟೇಷನ್ ಸಮಸ್ಯೆಯಿಂದ ಬಳಲುತ್ತಿದ್ದೀರ ? : ಇದನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ತಪ್ಪದೇ ಬಳಸಿ

ಹೌದು, ದಕ್ಷಿಣ ಕನ್ನಡ ಲೋಕಸಭಾ(Dakshina Kannada Lokasabha) ಕ್ಷೇತ್ರದಿಂದ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಬೂಡುಮಕ್ಕಿ(Satish Boodumakki) ಅವರು ಕೊನೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದಾರೆ. ಅಂದಹಾಗೆ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಮೂಲಕ ಕ್ಷೇತ್ರದಲ್ಲಿ 9 ಮಂದಿ ಕಣದಲ್ಲಿ ಉಳಿದಿದ್ದಾರೆ.

ಇದನ್ನೂ ಓದಿ: Bengaluru: ವಕೀಲೆಯಿಂದ ಬೆತ್ತಲೆ ವೀಡಿಯೋ ಮಾಡಿಸಿ, 10 ಲಕ್ಷ ಪೀಕಿಸಿದ ನಕಲಿ ಕಸ್ಟಮ್ಸ್‌ ಅಧಿಕಾರಿಗಳು; ಏನಿದು ಪ್ರಕರಣ

ಕಣದಲ್ಲಿರುವ ಅಭ್ಯರ್ಥಿಗಳೆಂದರೆ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೆಸ್‌ನ ಆ‌ರ್.ಪದ್ಮರಾಜ್ , ಬಹುಜನ ಸಮಾಜ ಪಕ್ಷದ ಕಾಂತಪ್ಪ ಅಲಂಗಾರ್, ಕರ್ನಾಟಕ ರಾಷ್ಟ್ರ ಸಮಿತಿಯ ರಂಜಿನಿ ಎಂ, ಉತ್ತಮ ಪ್ರಜಾಕೀಯ ಪಕ್ಷದ ಕೆ.ಇ.ಮನೋಹರ, ಕರುನಾಡ ಸೇವಕ ಪಕ್ಷದ ದುರ್ಗಾಪ್ರಸಾದ್‌, ಪಕ್ಷೇತರರಾಗಿ ದೀಪಕ್ ರಾಜೇಶ್ ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್ ಕುಮಾರ್ ಪೂಜಾರಿ ಆಗಿದ್ದಾರೆ.

Leave A Reply

Your email address will not be published.