Bengaluru: ವಕೀಲೆಯಿಂದ ಬೆತ್ತಲೆ ವೀಡಿಯೋ ಮಾಡಿಸಿ, 10 ಲಕ್ಷ ಪೀಕಿಸಿದ ನಕಲಿ ಕಸ್ಟಮ್ಸ್‌ ಅಧಿಕಾರಿಗಳು; ಏನಿದು ಪ್ರಕರಣ

Bengaluru: ವಕೀಲೆಯೊಬ್ಬರು ತನಗೆ ಜನರ ಗುಂಪೊಂದು ವೀಡಿಯೋ ಕಾಲ್‌ನಲ್ಲಿ ಬಟ್ಟೆ ಬಿಚ್ಚಲು ಹೇಳಿ 10 ಲಕ್ಷ ರೂ. ವಂಚನೆ ಮಾಡಿರುವ ಕುರಿತು ದೂರು ನೀಡಿದ್ದಾರೆ.

ಇದನ್ನೂ ಓದಿ: Canara Bank: ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಗ್ಗೆಯೇ ಗುಡ್ ನ್ಯೂಸ್ !!

ಎಪ್ರಿಲ್‌ 5 ರಂದು ಮುಂಬೈನಲ್ಲಿ ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ನನ್ನನ್ನು ಸಂಪರ್ಕಿಸಿ ನನ್ನ ಹೆಸರಿನಲ್ಲಿ ಡ್ರಗ್ಸ್‌ ಪ್ಯಾಕೇಜ್‌ ಸಿಂಗಾಪುರದಿಂ ರವಾನೆಯಾಗುತ್ತಿದೆ ಎಂದು ಹೇಳಿದ್ದು, ಮಾದಕ ವಸ್ತು ಪರೀಕ್ಷೆಗಾಗಿ ವೀಡಿಯೋ ಕರೆಯಲ್ಲಿ ವಿವಸ್ತ್ರಗೊಳ್ಳುವಂತೆ ಹೇಳಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Excise Policy Scam: ಇಡಿ ಬಂಧನದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈ ಕೋರ್ಟ್

ಇದು ಎರಡು ದಿನಗಳ ಕಾಲ ಮುಂದುವರಿದಿದ್ದು, ನಂತರ ಬ್ಲ್ಯಾಕ್‌ಮೇಲ್‌ ಮಾಡಲು ಶುರುಮಾಡಿದ್ದ ಅವರು ಪ್ರಾರಂಭ ಮಾಡಿದ್ದು, ತಮ್ಮ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾಯಿಸದಿದ್ದರೆ ವಿಡಿಯೋವನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಇದರಿಂದ ಬೆದರಿದ ವಕೀಲೆ ಅವರು ಹೇಳಿದ ಮೊತ್ತವನ್ನು ಖಾತೆಗೆ ಜಮಾ ಮಾಡಿದ್ದಾರೆ. ನಂತರ ಅವರು ಎ.7 ರಂದು ಪೊಲೀಸರಿಗೆ ದೂರನ್ನು ನೀಡಿದ್ದು, ಪೊಲೀಸರು ಸುಲಿಗೆ, ವಂಚನೆಗೆ ಸಂಬಂಧಪಟ್ಟಂತೆ ಐಟಿ ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

Leave A Reply

Your email address will not be published.