Andra Pradesh: ಸ್ನೇಹಿತನೆಂದು ಡಿಲಿವರಿ ಬಾಯ್ ಬಳಿ ಎಲ್ಲಾ ಸಮಸ್ಯೆ ಹೇಳಿದ್ಲು – ಆದ್ರೆ ಆತ ಮಾಡಿದ್ದು ಕೇಳಿದ್ರೆ ಬೆಚ್ಚಿಬೀಳ್ತೀರಾ !!
Andra Pradesh: ಸ್ನೇಹ ಸಂಬಂಧಗಳೇ ಹಾಗೆ. ಏನನ್ನೂ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಇಡಬೇಕೆಂದರೂ ಮನಸ್ಸೂ ಒಪ್ಪುವುದಿಲ್ಲ. ಸ್ನೇಹಿತರಲ್ಲೇ ಎಲ್ಲಾ ಸಮಸ್ಯೆ ಹೇಳೋಣ, ಏನಾದರೂ ಒಂದು ಪರಿಹಾರ ದೊರೆಯಬಹುದು, ಇಲ್ಲಾ ಅಟ್ಲೀಸ್ಟ್ ಸಮಾಧಾನ ಆದರೂ ಆಗಬಹುದು ಎಂಬ ನಂಬಿಕೆ. ಆದರೆ ಇದೇ ನಂಬಿಕೆ ಇಲ್ಲೊಬ್ಬಳ ಜೀವವನ್ನೇ ತೆಗೆದಿದೆ.
ಆಂಧ್ರದ(Andrapradesh) ವಾರಾಂಗಲ್ ಜಿಲ್ಲೆಯಲ್ಲಿ ನಡೆದ ಭಯಾನಕ ಕೃತ್ಯದ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ. ಮಲ್ಲಂಪಲ್ಲಿ ಮಂಡಲದ ಜಂಗಲಪಲ್ಲಿಯ ಅಕುನೂರಿ ಸುಪ್ರಿಯಾ(Supriya) (27) ಹೈದರಾಬಾದ್(Hyderabad) ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಶಶಿಕಾಂತ್ ಹೈಸ್ಕೂಲ್‌ನಲ್ಲಿ ಸಹಪಾಠಿಗಳು. ಇಲ್ಲಿ ಅಕುನೂರಿ ಸುಪ್ರಿಯ ಶಶಿಕಾಂತ್ ನನ್ನು ಬಾಲ್ಯ ಸ್ನೇಹಿತನೆಂದು ನಂಬಿ ಎಲ್ಲಾ ಸಮಸ್ಯೆ ಹೇಳಿಕೊಂಡರೆ ತನ್ನನ್ನು ನಂಬಿದ ಆಕೆಯನ್ನು ಈ ಪಾಪಿ ಬರ್ಬರವಾಗಿ ಕೊಂದಿದ್ದಾನೆ. ಅದೂ ತನ್ನ ಗೆಳತಿಯೊಂದಿಗೆ ಸೇರಿ !!
ಇದನ್ನೂ ಓದಿ: Tejaswini Gowda: ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಜಿ ಸಂಸದೆ ತೇಜಸ್ವಿನಿ ಗೌಡ
ಅಂದಹಾಗೆ ಶಶಿಕಾಂತ್(Shashikanth) ಗೆ ಇನ್ನೂ ಮದುವೆಯಾಗಿಲ್ಲ. ಆದರೆ ನಗರದಲ್ಲಿ ಮುಲುಗು ಜಿಲ್ಲೆಯ ಅಜೀರಾ ಶಿರೀಫಾ ಎಂಬ ವಿವಾಹಿತ ಮಹಿಳೆಯೊಂದಿಗೆ ವಾಸವಾಗಿದ್ದಾನೆ. ಇತ್ತ ಸುಪ್ರಿಯಾ ಮೈಸಂಪಲ್ಲಿಯ ವೆಂಗಲ ರಾಜ್ ಕಿರಣ್ ಎಂಬಾತನನ್ನು 8 ವರ್ಷದ ಹಿಂದೆ ಮದುವೆಯಾಗಿದ್ದಾಳೆ. ಗಂಡ ಎಲೆಕ್ಟ್ರಾನಿಕ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. ಕೆಲ ದಿನಗಳ ಹಿಂದೆ ಸುಪ್ರಿಯಾ ಶಶಿಕಾಂತ್ ಗೆ ಕರೆ ಮಾಡಿ, ತನಗೆ ಆರೋಗ್ಯ ಸಮಸ್ಯೆಗಳಿವೆ ಹೈದರಾಬಾದ್‌ನಲ್ಲಿ ಒಳ್ಳೇಯ ಆಸ್ಪತ್ರೆ ಇದ್ರೆ ಹೇಳಿ ಎಂದಿದ್ದಾಳೆ. ಶಶಿಕಾಂತ್ ಮತ್ತು ಸುಪ್ರಿಯಾ ಆಗಾಗ ಫೋನ್ ನಲ್ಲಿ ಮಾತನಾಡುತ್ತಿರುವುದು ಶಿರೀಷಾಗೆ ಜಲಸಿ ಉಂಟುಮಾಡಿದ್ದು, ಜಗಳ ಕೂಡ ನಡೆದಿದೆ. ಸುಪ್ರಿಯಾಳನ್ನೂ ಕರೆದು ವಾರ್ನಿಂಗ್ ಕೂಡ ಕೊಡಲಾಗಿದೆ.
ಇದು ಬಗೆಹರಿಯದ ಸಮಸ್ಯೆ ಎಂಧು ತಿಂಗಳ ಹಿಂದೆ ಶಶಿಕಾಂತ್ ಮತ್ತು ಶಿರೀಫಾ ಇಬ್ಬರೂ ಹೈದರಾಬಾದ್ ನಿಂದ ಸುಪ್ರಿಯಾ ಮನೆಗೆ ತೆರಳಿ ಮತ್ತೆ ಕರೆ ಮಾಡದಂತೆ ಆರ್ಡರ್ ಮಾಡಿದ್ದಾರೆ. ಇನ್ನು ಇಬ್ಬರೂ ಬಂದಾಗ ಸುಪ್ರಿಯಾ ಒಬ್ಬಳೇ ಇದ್ದು, ಆಕೆ ಮೈಮೇಲೆ ಚಿನ್ನವಿರುವುದು ಗಮನಿಸಿದ್ದಾರೆ. ತಮಗೆ ದುಡ್ಡಿನ ಸಮಸ್ಯೆ ಇದ್ದ ಕಾರಣ ಹೇಗಾದರೂ ಮಾಡಿ ಸುಪ್ರಿಯಾಳನ್ನು ಹತ್ಯೆ ಮಾಡಲು ಅಲ್ಲೇ ಸ್ಕೆಚ್ ಹಾಕಿದ್ದಾರೆ.
ಮತ್ತೆ ಯೋಜನೆಯ ಪ್ರಕಾರ ಮಾ.23ರಂದು ಮತ್ತೆ ಇಬ್ಬರೂ ಸುಪ್ರಿಯಾ ಮನೆಗೆ ಬಂದಿದ್ದಾರೆ. ಆಗಲೂ ಆಕೆ ಒಬ್ಬಳೇ ಇದ್ದು, ಚಹಾ ಮಾಡಲು ಅಡುಗೆ ಕೋಣೆಗೆ ಹೋದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲೆ ಮತ್ತು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಿಡಿದು ಬೈಕ್‌ನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ನಂತರ ಸುಪ್ರಿಯಾ ಕುಟುಂಬದವರ ದೂರಿನ ಮೇಲೆ ಪೋಲೀಸರು ತನಿಖೆ ಶುರು ಮಾಡಿದ್ದಾರೆ. ಹೀಗೆ ಪಾಪಿಗಳ ಬೆನ್ನತ್ತದಾಗ ಶಶಿಕಾಂತ್ ಹಾಗೂ ಶರೀಫಾರ ಸುಳಿವು ಸಿಕ್ಕಿದ್ದು, ಬಂಧಿಸಿ ಬೆಂಡೆತ್ತಿದ್ದಾರೆ. ಆಗ ಎಲ್ಲಾ ನಿಜ ಕಕ್ಕಿ ತಪ್ಪೊಪ್ಪಿಕೊಂಡಿದ್ದಾರೆ.