Uttar Pradesh: ಹಿಂದೂ ಸಾಧುವನ್ನು ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ ಪಾಪಿಗಳು – ಭಯಾನಕ ವಿಡಿಯೋ ವೈರಲ್!!

Uttar Pradesh ಅಲಿಗಢದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಹಿಂದೂ ಸಾಧು ಒಬ್ಬರ ಮೇಲೆ ಇಬ್ಬರು ಯುವಕರು ಅಮಾನುಷವಾಗಿ ಹಲ್ಲೆ ಮಾಡಿ, ಮನಬಂದಂತೆ ಥಳಿಸಿದ ಘಟನೆ ನಡೆದಿದೆ. ಸದ್ಯ ಈ ಕುರಿತು ಭಯಾನಕ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Pratap Simha : ನನಗೆ ಸೀಟ್ ತಪ್ಪಿಸಿದ್ದು ಯಾರೆಂಬುದರ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ !!

https://x.com/rohitt_tripathi/status/1774082539613024403?t=ueTTh6x5lQ38ZQ9CgDgXyw&s=08

ಹೌದು, ಪೆಟ್ರೋಲ್ ಬಂಕ್(Petrol Bunk) ಒಂದರ ಬಳಿ ಇಬ್ಬರು ಯುವಕರು ಸುಮ್ಮನೆ ನಿಂತಿದ್ದ ಸಾಧು(Swamiji) ಮೇಲೆ ದಿಢೀರ್ ಎಂದು ದಾಳಿ ನಡೆಸಿ ಮನಬಂದಂತೆ ಥಳಿಸಿ ಹಿಂಸಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಸಾಧು ಗಜರಾಜ್ ಸಿಂಗ್ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತಂತೆ ಅಲಿಗಢ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಹಲ್ಲೆ ನಡೆಸಿದ ಯುವಕರಾದ ಮಜೋಲಾ ಗ್ರಾಮದ ಗಬೀಸ್ ಮತ್ತು ರಾಜೇಶ್ ಇಬ್ಬರು ಕಂಠ ಪೂರ್ತಿ ಕುಡಿದಿದ್ದರು. ಈ ವೇಳೆ ಪೆಟ್ರೋಲ್ ಬಂಕ್‌ನಲ್ಲಿದ್ದ ಸಾಧು ಗಜರಾಜ್ ಸಿಂಗ್ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಆದರೆ ಯಾಕೆಂದು ತಿಳಿದುಬಂದಿಲ್ಲ. ಸದ್ಯ ಗಾಯಗೊಂಡಿರುವ ಸಾಧು ಗಜರಾಜ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ನೆಟ್ಟಿಗರು ಕೂಡ ಘಟನೆಯನ್ನು ಖಂಡಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

2 Comments
  1. […] ಇದನ್ನೂ ಓದಿ: Uttar Pradesh: ಹಿಂದೂ ಸಾಧುವನ್ನು ಮನಬಂದಂತೆ ಥಳಿಸಿ … […]

Leave A Reply

Your email address will not be published.