Delhi: “ದೆಹಲಿ ಬನೇಗಾ ಖಲಿಸ್ತಾನ್” : ದೆಹಲಿಯ ಮೆಟ್ರೋ ನಿಲ್ದಾಣದ ಪಿಲ್ಲರ್ ಮೇಲೆ ಕಲಿಸ್ತಾನಿ ಪರ ಘೋಷಣೆ ಪತ್ತೆ

Delhi: ದೇಶದಲ್ಲಿ ಇತ್ತೀಚಿಗೆ ಖಲಿಸ್ತಾನಿ ಭಯೋತ್ಪಾದಕರ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. ವಿದೇಶಗಳಲ್ಲಿ ಕುಳಿತು ಖಲಿಸ್ತಾನದ ರಚನೆಗೆ ತಯಾರಿ ನಡೆಸುತ್ತಿರುವ ಖಲಿಸ್ತಾನಿಗಳು ಭಾರತಕ್ಕೆ ನಿರಂತರ ಬೆದರಿಕೆಗಳನ್ನು ಒಡುತ್ತಲೇ ಬಂದಿದ್ದಾರೆ. ಇದೀಗ ದೆಹಲಿಯ ಮೆಟ್ರೋ ನಿಲ್ದಾಣದ ಪಿಲ್ಲರ್ ಒಂದರ ಮೇಲೆ ಖಲಿಸ್ತಾನ್ ಪರ ಘೋಷಣೆಯನ್ನು ಬರೆಯಲಾಗಿದೆ.

ಇದನ್ನೂ ಓದಿ: Dk Suresh: ಡಿಕೆ ಸುರೇಶ್ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ 75ರಷ್ಟು ಏರಿಕೆ ಕಂಡಿದೆ : ಅಸಲಿಗೆ ಡಿಕೆಸು ಅವರ ಒಟ್ಟು ಆಸ್ತಿ ಮೌಲ್ಯವೆಷ್ಟು ?

ಪಶ್ಚಿಮ ದಿಲ್ಲಿಯ ಪಂಜಾಬಿ ಬಾಗ್ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಗುರುವಾರ ಖಾಲಿಸ್ತಾನ್ ಪರ ಬರಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Uttarakhand: ಉತ್ತರ ಖಂಡದ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು

ಪಂಜಾಬಿ ಬಾಗ್ ಮೆಟ್ರೋ ನಿಲ್ದಾಣದ ಪಿಲ್ಲರ್‌ನಲ್ಲಿ ಖಲಿಸ್ತಾನ್ ಪರ ಬರಹದ ಬಗ್ಗೆ ಬೆಳಿಗ್ಗೆ 9:30 ರ ಸುಮಾರಿಗೆ ಪೊಲೀಸರಿಗೆ ಕರೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಕಂಬದ ಮೇಲೆ “ದೆಹಲಿ ಬನೇಗಾ ಖಲಿಸ್ತಾನ್” ಎಂದು ಬರೆದಿರುವುದು ಪತ್ತೆಯಾಗಿದೆ. ಈ ಬರಹವನ್ನು ಹಳದಿ ಬಣ್ಣದಲ್ಲಿ ಚಿತ್ರಿಸಲಾಗಿತ್ತು. ಬಳಿಕ ಅದನ್ನು ಕಪ್ಪು ಬಣ್ಣದ ಪೈಂಟ್ ಬಳಸಿ ಬರಹವನ್ನು ಅಳಿಸಿ ಹಾಕಲಾಗಿದ್ದು, ಪೊಲೀಸರು ಈ ಕುರಿತು ಎಫ್‌ಐಆ‌ರ್ ದಾಖಲಿಸಿದ್ದಾರೆ

Leave A Reply

Your email address will not be published.