Dk Suresh: ಡಿಕೆ ಸುರೇಶ್ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ 75ರಷ್ಟು ಏರಿಕೆ ಕಂಡಿದೆ : ಅಸಲಿಗೆ ಡಿಕೆಸು ಅವರ ಒಟ್ಟು ಆಸ್ತಿ ಮೌಲ್ಯವೆಷ್ಟು ?

Dk Suresh: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಮ್ಮ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಂಪಿ ಡಿಕೆ ಸುರೇಶ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆಬಿಟ್ ನಲ್ಲಿ ಒಟ್ಟಾರೆ ಅವರ ಆಸ್ತಿಯ ಮೌಲ್ಯ 5 ವರ್ಷಗಳಲ್ಲಿ 75 ರಷ್ಟು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: Uttarakhand: ಉತ್ತರ ಖಂಡದ ನಾನಕಮಟ್ಟಾ ಗುರುದ್ವಾರಕ್ಕೆ ನುಗ್ಗಿ ಕರಸೇವಾ ಪ್ರಮುಖ್ ಅವರನ್ನು ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು 593 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ, ಇದು ಐದು ವರ್ಷಗಳ ಹಿಂದಿನ ಆಸ್ತಿಗಿಂತ 75 ಶೇಕಡಾ ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗಕ್ಕೆ ಗುರುವಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Arvind Kejriwal: ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಜಾ ಗೊಳಿಸಿದ ದೆಹಲಿ ಹೈಕೋರ್ಟ್

ಐದು ವರ್ಷಗಳ ಹಿಂದೆ ಸುರೇಶ್ ಅವರ ಆಸ್ತಿ 338 ಕೋಟಿ ರು. ಆಗಿತ್ತು ಆದರೆ ಈಗ ಸುರೇಶ್ ಅವರ ಒಟ್ಟು ಆಸ್ತಿಯಲ್ಲಿ ಶೇಕಡಾ 188 ರಷ್ಟು ಏರಿಕೆ ಕಂಡು ಬಂದಿದೆ.

ಸುರೇಶ್ ಅವರ ಅಫಿಡವಿಟ್ ಪ್ರಕಾರ, ಅವರ ಸ್ಥಿರಾಸ್ತಿಗಳ ಮೌಲ್ಯವರ್ಧನೆಯು ಅವರ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿದೆ. ಅವರು ತಮ್ಮ ಹುಟ್ಟೂರಾದ ರಾಮನಗರ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ 486 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ, ಕೃಷಿಯೇತರ ಆಸ್ತಿಗಳು ಮತ್ತು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಐದು ವರ್ಷಗಳ ಹಿಂದೆ ಈ ಆಸ್ತಿ ಮೌಲ್ಯ 305 ಕೋಟಿ ರೂ. ಆಗಿತ್ತು.

ಸುರೇಶ್ ಅವರ ಚರ ಆಸ್ತಿ ಕೂಡ 2019 ರಲ್ಲಿ 33 ಕೋಟಿ ರೂ.ಗಳಿಂದ 106 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.220 ರಷ್ಟು ಏರಿಕೆ ದಾಖಲಿಸಿದೆ.

ಅವರ ಹೊಣೆಗಾರಿಕೆಗಳು ಏರಿಕೆ ಕಂಡಿದ್ದು, ಸುರೇಶ್ ಅವರು 57.27 ಕೋಟಿ ರೂಪಾಯಿ ವಿವಾದದಲ್ಲಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಆದಾಯ ತೆರಿಗೆ ಅಡಿಯಲ್ಲಿ 55.85 ಕೋಟಿ ರು. ಮತ್ತು ಬೆಂಗಳೂರಿನಲ್ಲಿ 1.42 ಕೋಟಿ ಆಸ್ತಿ ತೆರಿಗೆಯು ಸೇರಿದೆ ಎಂದು ಘೋಷಿಸಿಕೊಂಡಿದ್ದಾರೆ.

Leave A Reply

Your email address will not be published.