Belthangady: ವಿಜಯ್ ರಾಘವೇಂದ್ರ ಪತ್ನಿ ಕುಟುಂಬಕ್ಕೆ ಮತ್ತೊಂದು ಆಘಾತ – ಸ್ಪಂದನಾ ಮಾವ ಅಪಘಾತಕ್ಕೆ ಬಲಿ !!

Belthangady: ವಿಜಯ್ ರಾಘವೇಂದ್ರ(Vijay Raghavendra) ಅವರ ಪತ್ನಿ ಸ್ಪಂದನಾ ಅವರ ಸಾವಿನಿಂದ ಅವರ ಕುಟುಂಬ ಇನ್ನೂ ಹೊರ ಬಂದಿಲ್ಲ. ಆದರೆ ಈ ಬೆನ್ನಲ್ಲೇ ಸ್ಪಂದನಾ(Pandana) ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಕುಟುಂಬದಲ್ಲಿ ಮತ್ತೆ ನೋವು ಉಂಟಾಗಿದೆ. ಸ್ಪಂದನಾ ಅವರ ಮಾವ ಹೇರಾಜೆ ಶೇಖರ ಬಂಗೇರ(Heraje shekara bangera)ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ದ.ಕ(Dakshina kannada ) ಜಿಲ್ಲೆಯ ಬೆಳ್ತಂಗಡಿಯ(Belthangady) ಸಂತೆಕಟ್ಟೆಯಲ್ಲಿ ರಾತ್ರಿ ನಡೆದ ಘಟನೆ ನಿಧನರಾಗಿದ್ದಾರೆ. ಸಂತೆಕಟ್ಟೆಯಲ್ಲಿ ಫುಡ್ ಪಾರ್ಸೆಲ್ ಹಿಡಿದು ರಸ್ತೆ ದಾಟುವಾಗ ದುರಂತ ಸಂಭವಿಸಿದೆ.

ಅಂದಹಾಗೆ ದಿ.ಸ್ಪಂದನಾ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಅಣ್ಣ ಶೇಖರ ಬಂಗೇರ ಅವರು ಯುವತಿಯೋರ್ವಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ತಲುಪುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೂ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.