Price Of Cocoa: ಕೊಕ್ಕೊ ಧಾರಣೆಯಲ್ಲಿ ಹೆಚ್ಚಳ; ರೈತರ ಮುಖದಲ್ಲಿ ಸಂತಸ
Price Of Cocoa: ರೈತರ ಪಾಲಿನ ಆಶಾದಾಯಕ ಬೆಳೆ ಎನಿಸಿರುವ ಕೊಕ್ಕೊ ದರ ಇತಿಹಾಸದಲ್ಲೇ ಕೆ.ಜಿಗೆ ಡಬಲ್ ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.
ಇದನ್ನೂ ಓದಿ: Toll Rate: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ; ಏ. 1 ರಿಂದ ದಶಪಥ ಟೋಲ್ ಹೆಚ್ಚಳ
ಅತೀ ಹೆಚ್ಚು ಕೊಕ್ಕೊ ಬೆಳೆಯುವ ಪ್ರದೇಶಗಳಲ್ಲಿ ಸುಳ್ಯ
ವೂ ಒಂದು. ರೈತರ ಪಾಲಿಗಿಂದು ಆಶಾದಾಯಕ ಬೆಳೆಯಾಗಿ ಆದಾಯ ಒದಗಿಸುತ್ತಿದೆ. ಈ ಮೊದಲು ಅಡಕೆ ದರ ಏರುತ್ತಾ ಹೋದಾಗ ಕೊಕ್ಕೊ ದರ ಕುಂಟುತ್ತಲೇ ಸಾಗಿತ್ತು. ಮಾ.27ರಂದು ಸುಳ್ಯದಲ್ಲಿ ಕೆಜಿಗೆ 215 ರೂ.ಗೆ ಖರೀದಿಸಲಾಗುತ್ತಿದೆ. ಉತ್ತಮ ದರ ಇದ್ದರೂ ಕೊಕ್ಕೊ ಬೆಳೆ ಫಸಲು ಕಡಿಮೆ ಆಗಿರುವ ಕಾರಣ ಅದರ ಪ್ರಯೋಜನ
ಇದನ್ನೂ ಓದಿ: Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಕೋರ್ಟ್‌ನಲ್ಲಿ ಆರೋಪ ನಿರಾಕರಿಸಿದ ಆರೋಪಿ
ಕೃಷಿಕರಿಗೆ ಸಿಗುತ್ತಿಲ್ಲ. ಕೊಕ್ಕೊ ದರ ಏರುತ್ತಾ ಸಾಗಿದ್ದು, ತಿಂಗಳ ಹಿಂದೆ 100 ರೂ ದಾಖಲಿಸಿತ್ತು. ಬಳಿಕ ದರ ಏರಿ ಇದೀಗ 215 ರೂ.ಗೆ ತಲುಪಿದೆ.
ಡಿಸೆಂಬರ್‌ನಿಂದ ಮಾರ್ಚ್ ತನಕ ಕೊಕ್ಕೊ ಫಸಲು ಇರುತ್ತದೆ. ಹಲವು ವರ್ಷಗಳಿಂದ ಕೊಕ್ಕೊ ದರ ಕೆಜಿಗೆ 50-60 ರೂ ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಅಡಕೆ ದರ 500 ರೂ.ಗೆ ಏರಿದಾಗಲೂ ಕೊಕ್ಕೊ 50 ರೂ. ಇತ್ತು. ಇದರಿಂದ ಕೊಕ್ಕೂ ಲಾಭದಾಯಕವಾಗಿಲ್ಲ ಎಂದು ಕೃಷಿಕರು ನಿಧಾನಕ್ಕೆ ಕೊಕ್ಕೊ ಕೃಷಿಯಿಂದ ವಿಮುಖರಾಗತೊಡಗಿದರು. ಇದರಿಂದ ಕೊಕ್ಕೊ ಇಳುವರಿಯೂ ಕಡಿಮೆಯಾಯಿತು.