Toll Rate: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ; ಏ. 1 ರಿಂದ ದಶಪಥ ಟೋಲ್ ಹೆಚ್ಚಳ

Toll Rate: ಏ.1 ರಿಂದ ಅನ್ವಯವಾಗುವಂತೆ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.

ಇದನ್ನೂ ಓದಿ: Udupi: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಕೋರ್ಟ್‌ನಲ್ಲಿ ಆರೋಪ ನಿರಾಕರಿಸಿದ ಆರೋಪಿ

ಹೆದ್ದಾರಿ ಲೋಕಾರ್ಪಣೆಗೊಂಡ ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಟೋಲ್ ದರ ಹೆಚ್ಚಳವಾಗಿದ್ದು, ಮೂರನೇ ದರ ನಿಗದಿಯಾಗಿದೆ. 2023ರ ಮಾರ್ಚ್ ನಲ್ಲಿ ಟೋಲ್ ಸಂಗ್ರಹ ಆರಂಭವಾಗಿತ್ತು. ನಂತರ ಜೂನ್ ನಲ್ಲಿ ಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: CM Siddaramaia: ದೇವೇಗೌಡರದ್ದು ಅನುಕೂಲ ಸಿಂಧು ರಾಜಕಾರಣ : ಸಿಎಂ ಸಿದ್ದರಾಮಯ್ಯ

ಶುಲ್ಕ ಹೆಚ್ಚಳದ ಬಗ್ಗೆ ಟೋಲ್ ಸಿಬ್ಬಂದಿ ವಾಹನ ಸವಾರರಿಗೆ ಕರಪತ್ರ ಹಂಚುತ್ತಿದ್ದಾರೆ. ದರಪಟ್ಟಿ ಫಲಕ ತಿದ್ದುಪಡಿ ಮಾಡಲಾಗುತ್ತಿದೆ. ಹೂತನ ಪರಿಷ್ಕರಣೆಯಲ್ಲಿ ಶೇ.3 ತಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ.

ಏಕಮುಖ ಸಂಚಾರ ಕಾರು/ವ್ಯಾನ್ / ಜೀಪ್‌ಗಳಿಗೆ ಶುಲ್ಕ 155 ರೂ.ನಿಂದ 160ಕ್ಕೆ, ಲಘು ವಾಣಿಜ್ಯ ಬಳಕೆ ವಾಹನಗಳಿಗೆ 250ರಿಂದ 260ಕ್ಕೆ, ಟ್ರಕ್ / ಬಸ್/ಎರಡು ಆಕ್ಸೆಲ್ ವಾಹನಗಳಿಗೆ ಶುಲ್ಕ 525ರಿಂದ 540 ರೂ.ಗೆ ಏರಿಕೆಯಾಗಿದೆ. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳಿಗೆ 575ರಿಂದ ರೂ.590 ರೂ. ಗೆ, ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳಿಗೆ 825 ರಿಂದ 840 ರೂ.ಗೆ ಹೆಚ್ಚಳವಾಗಿದೆ.

1 Comment
  1. […] ಇದನ್ನೂ ಓದಿ: Toll Rate: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ; ಏ. … […]

Leave A Reply

Your email address will not be published.