Home Karnataka State Politics Updates Amith Shah on PoK: ‘ಅವರು ನಮ್ಮ ಸಹೋದರರು’, ಪಿಒಕೆ ಮುಸ್ಲಿಮರ ಕುರಿತು ಅಮಿತ್‌ ಶಾ...

Amith Shah on PoK: ‘ಅವರು ನಮ್ಮ ಸಹೋದರರು’, ಪಿಒಕೆ ಮುಸ್ಲಿಮರ ಕುರಿತು ಅಮಿತ್‌ ಶಾ ಮಾತು

Amith Shah on PoK

Hindu neighbor gifts plot of land

Hindu neighbour gifts land to Muslim journalist

Amith Shah on PoK: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದ್ದು, ಇದು ವಾಸ್ತವ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪಿಒಕೆಯ ಮುಸ್ಲಿಂ ಸಹೋದರರೂ ನಮ್ಮವರೇ, ಭೂಮಿಯೂ ನಮ್ಮದೇ. ಪಾಕಿಸ್ತಾನ ಪಿಒಕೆ ವಶಪಡಿಸಿಕೊಂಡಿದೆ. ಈ ಸಮಯದಲ್ಲಿ, 370 ನೇ ವಿಧಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸುವಾಗ, ಅವರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗುರಿಯಾಗಿಸಿ ಗುಲಿಸ್ತಾನ್ ನ್ಯೂಸ್ ಜೊತೆ ಮಾತನಾಡಿದ್ದಾರೆ ಅಮಿತ್ ಶಾ.

ಇದನ್ನೂ ಓದಿ: Bigg Boss Winner Detained: ಬಿಗ್‌ಬಾಸ್‌ ವಿನ್ನರ್‌ ಜೊತೆ 14 ಮಂದಿಯನ್ನು ರಾತ್ರೋರಾತ್ರಿ ಅರೆಸ್ಟ್‌ ಮಾಡಿದ ಪೊಲೀಸರು

ಇಂದು ಪಾಕಿಸ್ತಾನ ಹಸಿವು ಮತ್ತು ಬಡತನದಿಂದ ನರಳುತ್ತಿದ್ದು, ಅಲ್ಲಿನ ಜನರು ಕೂಡ ಕಾಶ್ಮೀರವನ್ನು ಸ್ವರ್ಗದಂತೆ ನೋಡುತ್ತಿದ್ದಾರೆ. ಕಾಶ್ಮೀರವನ್ನು ಯಾರಾದರೂ ಉಳಿಸಲು ಸಾಧ್ಯವಾದರೆ ಅದು ಪ್ರಧಾನಿ ಮೋದಿಗೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lesbians: 5 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಸುಂದರ ಸಲಿಂಗ ಜೋಡಿ !!

ಆರ್ಟಿಕಲ್ 370 ಕುರಿತು ಜಮ್ಮು ಮತ್ತು ಕಾಶ್ಮೀರದ ಜನರಲ್ಲಿ ಹರಡಿದ್ದ ತಪ್ಪು ಕಲ್ಪನೆಯನ್ನು ಈಗ ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಅವರು ಹೇಳಿದರು. 370 ತೆಗೆದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಪ್ರವಾಸೋದ್ಯಮ ಹೆಚ್ಚಾಗಿದೆ, ಅಭಿವೃದ್ಧಿ ಜನರ ಮನೆ ತಲುಪಿದೆ, ಭಯೋತ್ಪಾದನೆ ಕೊನೆಗೊಂಡಿದೆ, ಕಲ್ಲು ತೂರಾಟ ಶೂನ್ಯವಾಗಿದೆ.

ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕುರಿತ ಪ್ರಶ್ನೆಗೆ, ಮೋದಿ ಸರ್ಕಾರವು ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಒಬಿಸಿಗಳಿಗೆ ಮೀಸಲಾತಿ ನೀಡಿದೆ ಎಂದು ಶಾ ಹೇಳಿದರು.

ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀಡಲಾಗಿದೆ. ಎಸ್ಸಿ, ಎಸ್ಟಿಗೆ ಜಾಗ ಮಾಡಿಕೊಟ್ಟಿದ್ದೇವೆ. ಗುಜ್ಜರ್ ಮತ್ತು ಬಕರ್ವಾಲ್ಗಳ ಪಾಲು ಕಡಿಮೆ ಮಾಡದೆ ಗುಡ್ಡಗಾಡುಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡ ಜನರಿಗೆ ವಸತಿ ಕಲ್ಪಿಸಲು ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ.