Home Crime Sonu Shrinivas Gowda: ಪರಪ್ಪನ ಅಗ್ರಹಾರ ಜೈಲು ಪಾಲಾದ ಸೋನು ಗೌಡ !!

Sonu Shrinivas Gowda: ಪರಪ್ಪನ ಅಗ್ರಹಾರ ಜೈಲು ಪಾಲಾದ ಸೋನು ಗೌಡ !!

Sonu Shrinivas Gowda

Hindu neighbor gifts plot of land

Hindu neighbour gifts land to Muslim journalist

Sonu Shrinvas Gowda: ಬಾಲಕಿಯ ಅಕ್ರಮ ದತ್ತು ಪ್ರಕರಣದಲ್ಲಿ ನಟಿ ಸೋನು ಗೌಡ ಅವರುಗೆ ಏಪ್ರಿಲ್ 8 ರವರೆಗೆ ಸಿಜೆಎಂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಸೋನು ಗೌಡರ(Sonu Shrinivas Gowda)ನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ

ಇದನ್ನೂ ಓದಿ: Telangana: ಗಂಡನ ವಿರುದ್ಧ ಕಂಪ್ಲೇಂಟ್ ಕೊಡೋಕೆ ಬಂದ 23ರ ಹೆಂಡತಿ – ಬಲೆಗೆ ಬೀಳಿಸಿಕೋಂಡು ASI !!

ಹೌದು, ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಗ್‌ಬಾಸ್ ಖ್ಯಾತಿಯ ರೀಲ್ಸ್ ರಾಣಿ ಸೋನು ಶ್ರೀನಿವಾಸ ಗೌಡಳನ್ನು ನಗರದ ಸಿಜೆಎಂ ಕೋರ್ಟ್ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧು ರೀಲ್ಸ್ ಮಾಡುತ್ತಿದ್ದ ಸೋನು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾಳೆ.

ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ (ಬೆಂಗಳೂರು ಪಶ್ಚಿಮ) ಕಾನೂನು ಪರಿವೀಕ್ಷಣಾ ಅಧಿಕಾರಿ ಗೀತಾ ನೀಡಿದ್ದ ದೂರು ಆಧರಿಸಿ ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಎಫ್‌ಐಆ‌ರ್ ದಾಖಲಾಗಿತ್ತು. ಸೋನು ಶ್ರೀನಿವಾಸ್‌ ಗೌಡ ಅವರನ್ನು ಮಾರ್ಚ್ 22ರಂದು ಬಂಧಿಸಿದ್ದ ಪೊಲೀಸರು, ವಿಚಾರಣೆಗಾಗಿ ಮಾರ್ಚ್‌ 25ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದರು. ಕಳೆದ ಶುಕ್ರವಾರ ಆಕೆಯನ್ನು ಪೊಲೀಸರು ಬಂಧಿಸಿದಾಗ ಕೋರ್ಟ್ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆಕೆಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

“ಸೋನು ಶ್ರೀನಿವಾಸ್‌ ಗೌಡ ಅವರನ್ನು ವಾಸವಿದ್ದ ಮನೆಗೆ ಹಾಗೂ ಬಾಲಕಿಯ ರಾಯಚೂರಿನ ಮನೆಗೆ ಕರೆದೊಯ್ದು ಮಹಜರು ನಡೆಸಲಾಗಿದೆ. ಜೊತೆಗೆ, ಮಗು ದತ್ತು ಸಂಬಂಧ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. ಕಸ್ಟಡಿಗೆ ಅವಧಿ ಮುಗಿದಿದ್ದರಿಂದ, ಅವರನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.