JP Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೆಂಡತಿಯ ಐಶಾರಾಮಿ ಕಾರು ಕಳವು !!

 

JP Nadda: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಪತ್ನಿಗೆ ಸೇರಿದ ಪಾರ್ಚೂನರ್ ಕಾರು ದೆಹಲಿಯ ಗೋವಿಂದಪುರಿಯಲ್ಲಿ ಕಳ್ಳತನವಾಗಿದೆ ಎನ್ನಲಾಗಿದೆ.

ಜೆ.ಪಿ. ನಡ್ಡಾ(JP Nadda) ಅವರ ಪತ್ನಿಗೆ ಸೇರಿದೆ ಎನ್ನಲಾದ ಟೊಯೊಟಾ ಫಾರ್ಚ್ಯೂನರ್(Fortuner) ಕಾರನ್ನು, ಚಾಲಕ ಗೋವಿಂದಪುರಿಯ ತಮ್ಮ ನಿವಾಸದ ಬಳಿ ನಿಲ್ಲಿಸಿದ್ದರು. ಊಟ ಮುಗಿಸಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ವರದಿಯಾಗಿದೆ.

ದೆಹಲಿ ಪೊಲೀಸರು(Delhi police)ಪ್ರಕರಣ ದಾಖಲಿಸಿಕೊಂಡು ಕಾರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರಿಗೆ ದೊರೆತ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಟೊಯೊಟಾ ಫಾರ್ಚೂನರ್ ಕೊನೆಯ ಬಾರಿಗೆ ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಆದರೆ ಇದುವರೆಗೂ ಕಾರಿನ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

ಅಂದಹಾಗೆ ಕಾರು ಕಳ್ಳತನ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದು ಹೈ ಪ್ರೊಫೈಲ್ ಪ್ರಕರಣವಾದ ಕಾರಣ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ಕಾರು ಚಾಲಕ ಜೋಗಿಂದರ್ ನೀಡಿದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.