Sonu Gowda: 8 ವರ್ಷದ ಬಾಲಕಿಯ ದತ್ತು ವಿಚಾರ; ಸೋನು ಗೌಡ ಬಂಧನ

Share the Article

Sonu Gowda: ಇತ್ತೀಚೆಗೆ 8 ವರ್ಷದ ಬಾಲಕಿಯನ್ನು ದತ್ತು ಪಡೆದಿದ್ದ ಸೋನು ಗೌಡ ಅವರ ವಿರುದ್ಧ ಇದೀಗ ಬ್ಯಾಡರ ಹಳ್ಳಿ ಪೊಲೀಸರು ನೋಟಿಸ್‌ ಕಳುಹಿಸಿರುವ ಕುರಿತು ವರದಿಯಾಗಿದೆ. ಅನಧಿಕೃತವಾಗಿ ಸೋನು ಗೌಡ ಅವರು ಮಗುವನ್ನು ಮನೆಯಲ್ಲಿ ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿರುವ ಕುರಿತ ಆರೋಪವೊಂದು ಕೇಳಿ ಬಂದಿದೆ. ಇದೀಗ ಜೆಜೆ ಕಾಯ್ದೆ ಅಡಿಯಲ್ಲಿ ಸೋನು ಗೌಡ ಅವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಉತ್ತರ ಕರ್ನಾಟಕ 8 ವರ್ಷದದ ಮಗುವನ್ನು ಸೋನು ಗೌಡ ದತ್ತು ತೆಗೆದುಕೊಂಡಿದ್ದನ್ನು ಸಾರ್ವಜನಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಆದರೆ ಸೋನು ಗೌಡ ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ISRO : ಆರ್ ಎಲ್ ವಿ ವಾಹನ ‘ ಪುಷ್ಪಕ್ ‘ ನ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

ಸೋನು ಗೌಡ ಅವರು ತಮ್ಮ ವೀಡಿಯೋದಲ್ಲಿ ಮಗುವಿನ ಕುರಿತು ವೀಡಿಯೋ ಹಂಚಿಕೊಂಯಾತಡಿದ್ದು, ಮಗುವಿನ ತಂದೆ ತಾಯಿ ಕೂಡಾ ನೋಟಿಸ್‌ ಕಳುಹಿಸಲಾಗಿದೆ. ಮಗುವನ್ನು ದತ್ತು ತೆಗೆದುಕೊಂಡಿದ್ದು ನಿಜವಾ? ಅಥವಾ ದತ್ತು ತೆಗೆದುಕೊಳ್ಳುವಾಗ ಹಣ ಪಡೆದಿದ್ದೀರ ಎಂಬ ಪ್ರಶ್ನೆ ಕೇಳಲಾಗಿದೆ.

ಇದನ್ನೂ ಓದಿ: Rain Alert: ಇಂದಿನಿಂದ ಐದು ದಿನ ಈ ಭಾಗದಲ್ಲಿ ನಿರಂತರ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಸೋನು ಗೌಡ ಅವರ ಜೊತೆ 8 ವರ್ಷದ ಮಗುವೊಂದು ಇದ್ದು, ಈ ಮಗುವನ್ನು ತಂದೆ ತಾಯಿಯರ ಬಳಿಯಿಂದ ತನ್ನ ಜೊತೆಯಲ್ಲಿ ಇಟ್ಟುಕೊಂಡಿರುವ ಕುರಿತು ನೆಟ್ಟಿಗರಿಂದ ಕೂಡಾ ಟೀಕೆ ವ್ಯಕ್ತವಾಗಿತ್ತು. ಆದರೆ ಸೋನು ಅವರು ತನ್ನ ಬಗ್ಗೆ ಎಲ್ಲಾ ವಿಚಾರಣೆ ಮಾಡಿಯೇ ಅವರು ನನಗೆ ಮಗುನ ದತ್ತು ಕೊಟ್ಟಿದ್ದಾರೆ ಎಂದು ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದರು.

Leave A Reply