Mangaluru: ಹುಡುಗಿ ವಿಚಾರದಲ್ಲಿ ಕಾಲೇಜು ಹುಡುಗರ ಗಲಾಟೆ; ಯುವಕನಿಗೆ ಹಿಗ್ಗಾಮುಗ್ಗ ಹಲ್ಲೆಗೈದ ಲವ್ವರ್‌; ವೀಡಿಯೋ ವೈರಲ್ ‌

Mangaluru: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಯುವಕರು ಹುಡುಗಿ ವಿಚಾರದಲ್ಲಿ ಹೊಡೆದಾಡಿರುವ ಘಟನೆಯೊಂದು ನಡೆದಿದ್ದು, ಈ ಘಟನೆಯಲ್ಲಿ ಒಬ್ಬ ಯುವಕನಿಗೆ ಮುಖದಲ್ಲಿ ರಕ್ತ ಒಸರುವ ರೀತಿ ಹಿಗ್ಗಾಮುಗ್ಗ ಹೊಡೆದಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ: Praveen Nettaru Murder Case: ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ; ಒಂದೇ ಜೈಲಿನಲ್ಲಿ ಇರಿಸುವಂತೆ ಕೋರಿ ಆರೋಪಿಗಳ ಅರ್ಜಿ; ವಜಾಗೊಳಿಸಿದ ಹೈಕೋರ್ಟ್‌

ಈ ಘಟನೆ ನೀರು ಮಾರ್ಗದಲ್ಲಿ ನಡೆದಿದ್ದು, ಯುವಕರ ಹೊಡೆದಾಟದ ದೃಶ್ಯ ಇದೆ. ಬಜ್ಜೋಡಿ ನಿವಾಸಿ ಯುವಕ ತಾನು ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಪದೇ ಪದೇ ಹಣ ಕೇಳಿ ಹಿಂಸೆ ನೀಡುತ್ತಿದ್ದು, ಈ ಕುರಿತು ಯುವತಿ ನೀರುಮಾರ್ಗದಲ್ಲಿರುವ ತನ್ನ ಗೆಳೆಯನಿಗೆ ವಿಷಯ ತಿಳಿಸಿದ್ದರು. ಇದನ್ನು ತಿಳಿದ ಲವರ್‌ ಬಜ್ಜೋಡಿಯಿಂದ ಐದಾರು ಮಂದಿ ಯುವಕರ ಜೊತೆ ಕಾರಿನಲ್ಲಿ ನೀರು ಮಾರ್ಗಕ್ಕೆ ತೆರಳಿ ಅಲ್ಲಿ ಯುವಕನನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Mangaluru Rain: ದಕ್ಷಿಣ ಕನ್ನಡದ ಹಲವು ಕಡೆ ಮಳೆಯ ಸಿಂಚನ; ಕಾದು ಕೆಂಡದಂತಿದ್ದ ಇಳೆಗೆ ವರುಣನ ಕೃಪೆ

ಪಾಲ್ದಾನೆ ಎಂಬಲ್ಲಿ ಯುವಕನಿಗೆ ತಡರಾತ್ರಿಯಲ್ಲಿ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲಿ ಈ ಹೊಡೆದಿರುವ ವೀಡಿಯೋವನ್ನು ಮಾಡಿ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ನಂತರ ಎರಡೂ ಕಡೆಯ ಕುಟುಂಬಸ್ಥರು ಕಂಕನಾಡಿ ಗ್ರಾಮಾಂತರ ಠಾಣೆಗೆ ಬಂದು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.