Drowned in Sea: ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯಲೆಂದು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಲುಕಿ ಸಾವು

Share the Article

Mangaluru: ಮಂಗಳೂರಿನ ತೋಟಬೆಂಗ್ರೆಯ ಕಡಲ ತೀರದಲ್ಲಿ ಮೀನು ಹಿಡಿಯಲೆಂದು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗಿ ಸಾವಿಗೀಡಾದ ಘಟನೆ ನಡೆದಿದೆ. ಪ್ರಜೀತ್‌ ಎಂ ತಿಂಗಳಾಯ (15) ಎಂಬಾತನೇ ಮೃತ ಬಾಲಕ.

ಇದನ್ನೂ ಓದಿ: Belthangady: ಮಂಗಳೂರು-ಹಾಸನ ಪೆಟ್ರೋನೆಟ್‌ ಡೀಸೆಲ್‌ ಪೈಪ್‌ಲೈನಿಗೆ ಕನ್ನ; ದೂರು ದಾಖಲು

ವಿದ್ಯಾಭ್ಯಾಸದ ಖರ್ಚಿಗೆಂದು ತಂದೆ ಜೊತೆ ಪ್ರಜೀತ್‌ ಕೂಡಾ ಮೀನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ ಕೂಡಾ ಮೀನುಗಾರಿಕೆಗೆಂದು ಹೋಗಿದ್ದ ಈತ ಈ ಸಂದರ್ಭದಲ್ಲಿ ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿದ್ದು, ಸಮುದ್ರ ಪಾಲಾಗಿದ್ದ.

ಇದನ್ನೂ ಓದಿ: Crime News: ಮೃತ ತಂದೆಯ ಪಿಎಫ್ ಹಣ ಕೇಳಲು ಹೋದ ಯುವತಿಯನ್ನು ತನ್ನ ಜೊತೆ ಮಲಗುವಂತೆ ಕೇಳಿದ್ದ ಖಾಸಗಿ ಕಂಪನಿ ಹೆಚ್.ಆರ್. ಮ್ಯಾನೇಜರ್ ವಿರುದ್ಧ ದೂರು ದಾಖಲು

ತೀವ್ರ ಹುಡುಕಾಟದ ನಂತರ ಗಂಭೀರ ಸ್ಥಿತಿಯಲ್ಲಿ ಪ್ರಜೀತ್‌ ಪತ್ತೆಯಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದು, ಆದರೆ ದಾರಿ ಮಧ್ಯೆ ಮೃತ ಹೊಂದಿದ್ದಾನೆ ಎಂದು ವರದಿಯಾಗಿದೆ. ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply