J C Madhuswamy: ಯಡಿಯೂರಪ್ಪ ಆಪ್ತ, ಬಿಜೆಪಿ ಪ್ರಬಲ ನಾಯಕ ಜೆ. ಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ?!
J C Madhuswamy: ಲೋಕಸಭಾ ಚುನಾವಣೆಗೆ(Parliament Election) ರಾಜ್ಯದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ. ಯಾಕೆಂದರೆ ಟಿಕೆಟ್ ವಂಚಿತ ಬಿಜೆಪಿಯ ಪ್ರಮುಖ ನಾಯಕರು ಒಳಗೊಳಗೆ ಕೆಂಡಕಾರುತ್ತಿದ್ದಾರೆ. ಈಗಾಗಲೇ ಕೆ ಎಸ್ ಈಶ್ವರಪ್ಪನವರು ಬಂಡಾಯವೆದಿದ್ದು, ಪಕ್ಷೇತರ ಸ್ಪರ್ಧೆಗೆ ರೆಡಿಯಾಗಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಸದಾನಂದ ಗೌಡರು(Sadananda Gowda)ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಈ ಬೆನ್ನಲ್ಲೇ ಮತ್ತೊಬ್ಬ ನಾಯಕ ಮಾಧುಸ್ವಾಮಿ(J C Madhuswamy) ಅವರು ಕೂಡ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಲೋಕಸಭಾ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ತುಮಕೂರು ಬಿಜೆಪಿ ಈಗ ಒಡೆದ ಮನೆಯಾಗಿದ್ದು, ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಜೆಸಿ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ತುಮಕೂರಲ್ಲಿ ವಿ ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಭಾರೀ ಆಕ್ರೋಶಗೊಂಡಿರುವ ಮಾಧುಸ್ವಾಮಿ ಈಗ ಬಿಜೆಪಿಯನ್ನು ತೊರೆಯಲು ಮುಂದಾಗಿದ್ದಾರೆ. ಈ ಬಗ್ಗೆ ಆಪ್ತರ ಜೊತೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Delhi: ದರೆಗುರುಳಿದ ಎರಡು ಅಂತಸ್ತಿನ ಕಟ್ಟಡ : ಇಬ್ಬರ ಸಾವು
ಅಂದಹಾಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಸೋಲು ಅನುಭವಿಸಿದ್ದರು. ಜೆಡಿಎಸ್‌ನ ಸಿಬಿ ಸುರೇಶ್ ಬಾಬು ವಿರುದ್ಧ ಪರಾಭವಗೊಂಡಿದ್ದ ಮಾಧುಸ್ವಾಮಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ, ಬಿಜೆಪಿ ನಾಯಕರು ಬೆಂಗಳೂರಿನ ವಿ ಸೋಮಣ್ಣ ಅವರಿಗೆ ಮಣೆ ಹಾಕಿರುವುದು ಮಾಧುಸ್ವಾಮಿ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಗ್ಗೆ ಮಾಧುಸ್ವಾಮಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ನಡೆ ಮಾತ್ರ ನಿಗೂಡವಾಗಿದೆ.