Delhi: ಧರೆಗುರುಳಿದ ಎರಡು ಅಂತಸ್ತಿನ ಕಟ್ಟಡ : ಇಬ್ಬರ ಸಾವು

ಇಂದು ಮುಂಜಾನೆ ಎರಡು ಅಂತಸ್ತಿನ ಕಟ್ಟಡ ದರೆ ಗುರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ದೆಹಲಿಯ ಕಬೀರ್ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: Crime News: ಗೆಳೆಯನ ಜೊತೆ ಫಾರಿನ್‌ ಟೂರ್‌ ಹೋಗಲು ಕಿಡ್ನಾಪ್‌ ನಾಟಕವಾಡಿದ ಮಗಳು; 30 ಲಕ್ಷಕ್ಕೆ ತಂದೆಯ ಬಳಿ ಬೇಡಿಕೆ! ಮಗಳ ನಕಲಿ ನಾಟಕ ಪತ್ತೆಯಾಗಿದ್ದು ಹೀಗೆ…

ಹಳೆಯ ನಿರ್ಮಾಣ ಕಟ್ಟಡದ ಕುಸಿತಕ್ಕೆ ಒಳಗಾಗಿರುವ ಬಗ್ಗೆ ಮುಂಜಾನೆ 2.16 ಕ್ಕೆ ರಕ್ಷಣಾ ಸೇವೆಗಳಿಗೆ ಕರೆ ಬಂದಿತು. ಮೂವರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ರಕ್ಷಣಾ ಕಾರ್ಯಾಚರಣೆ ಮಾಡುವ ಮೂಲಕ ಅವರೆಲ್ಲರನ್ನೂ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯವ ದಾರಿ ಮಧ್ಯೆ ಇಬ್ಬರು ಸಾವನ್ನಪ್ಪಿದ್ದು. ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ .

ಇದನ್ನು ಓದಿ: Arunachal Pradesh: “ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ” : ಹೆಚ್ಚುತ್ತಿರುವ ಭಾರತ – ಚೀನಾ ಉದ್ವಿಗ್ನತೆಯ ನಡುವೆ ಭಾರತದ ಪರ ನಿಲುವು ತಾಳಿದ ಅಮೆರಿಕ

ಮೃತರನ್ನು ಅರ್ಷದ್ ( 30 ) ಮತ್ತು ತೌಹಿದ್ ( 20 ) ಎಂದು, ಗಾಯಗೊಂಡ ವ್ಯಕ್ತಿಯನ್ನು ರೆಹಾನ್ ( 22 ) ಎಂದು ಗುರುತಿಸಲಾಗಿದೆ. ಕಟ್ಟಡದ ಮಾಲೀಕನನ್ನು ಶಾಹಿದ್ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.