Student Heart Attack: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲೇ ಕುಸಿದುಬಿದ್ದು ಹೃದಯಾಘಾತಕ್ಕೊಳಗಾದ ವಿದ್ಯಾರ್ಥಿನಿ; ಸ್ಥಳದಲ್ಲೇ ಸಾವು

Student Heart Attack: ಹೃದಯಾಘಾತವು ಇತ್ತೀಚಿನ ದಿನಗಳಲ್ಲಿ ಹಿರಿಯರು, ಕಿರಿಯರು ಎನ್ನದೇ ಬರುತ್ತಿದೆ. ಇದು ನಿಜಕ್ಕೂ ಕಳವಳಕಾರಿಯಾದ ವಿಷಯ.

ಇದನ್ನೂ ಓದಿ: Baba Ramdev: ನ್ಯಾಯಾಂಗ ನಿಂದನೆ ನೋಟಿಸ್ ಗೆ ಉತ್ತರಿಸಲು ನಿರಾಕರಿಸಿದ ಬಾಬಾ ರಾಮದೇವ್ ಗೆ ಸುಪ್ರೀಂ ಕೋರ್ಟ್ ಬುಲಾವ್

ಆಂಧ್ರಪ್ರದೇಶದ ವೈಎಸ್‌ಆರ್‌ ಜಿಲ್ಲೆಯ ರಾಜುಪಾಲೆಂ ಮಂಡಲದಲ್ಲಿ ಕೊರ್ರಪಾಡುವಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಲಿಖಿತಾ (15) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವಿಗೀಡಾದ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Intresting News: ಮನೆಕೆಲಸ ಮಾಡಿದ್ದಕ್ಕಾಗಿ ಗಂಡನಿಂದ 79 ಲಕ್ಷ ಪರಿಹಾರ ಪಡೆದ ಪತ್ನಿ

ನಿನ್ನೆ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿದ್ದು, ಮಧ್ಯಾಹ್ನದ ಊಟದ ನಂತರ ತನ್ನ ಸಹ ವಿದ್ಯಾರ್ಥಿಗಳೊಂದಿಗೆ ಮಾತನಾಡುತಿದ್ದಾಗ ಕುಸಿದು ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಸಹಪಾಠಿಗಳು ಕೂಡಲೇ ಶಾಲಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ನಂತರ ಶಾಲಾ ಆಡಳಿತ ಮಂಡಳಿ ಲಿಖಿತಾಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪರೀಕ್ಷೆ ಮಾಡಿದ ವೈದ್ಯರು ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಆಕೆಯ ಪ್ರಾಣ ಹೋಗಿರುವುದಾಗಿ ಹೇಳಿದ್ದಾರೆ.

Leave A Reply

Your email address will not be published.