B S Yadiyurappa: ಯಡಿಯೂರಪ್ಪರ ಫೋಕ್ಸೋ ಕೇಸಿನದ್ದು ಎನ್ನಲಾದ ವಿಡಿಯೋ ಲೀಕ್ !!

 

B S Yadiyurappa: ಲೋಕಸಭಾ ಚುನಾವಣೆ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಯಡಿಯೂರಪ್ಪ(B S Yadiyurappa)ನವರ ಫೋಕ್ಸೋ ಪ್ರಕರಣ(Pocso case) ಭಾರೀ ಸದ್ದುಮಾಡುತ್ತಿದೆ. ಈ ಪ್ರಕರಣವನ್ನು CID ಗೂ ಸರ್ಕಾರ ವಹಿಸಿದೆ. ಕಂಪ್ಲೇಂಟ್ ನೀಡಿದವಳು ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಆದರೆ ಈ ಬೆನ್ನಲ್ಲೇ ಅಚ್ಚರಿ ಎಂಬಂತೆ ಈ ಕೇಸಿಗೆ ಸಂಬಂಧಪಟ್ಟದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಆದರೆ ಇದು ಎಷ್ಟು ಸತ್ಯಾ ಸತ್ಯತೆ ಎಂದು ತಿಳಿಯಬೇಕಿದೆ.

ಅಂದಹಾಗೆ ವೈರಲ್ ಆದರ ವಿಡಿಯೋದಲ್ಲಿ ಯಡಿಯೂರಪ್ಪರಂತೆಯೇ ಒಬ್ಬರು ವ್ಯಕ್ತಿ ಒಂದು ಕೊಠಡಿಯಲ್ಲಿ ಕುಳಿತಿದ್ದಾರೆ. ಅಲ್ಲದೆ ಒಬ್ಬಳು ಮಹಿಳೆ, ಒಬ್ಬಳು ಯುವತಿ ಹಾಗೂ ಕೊನೆಯಲ್ಲಿ ಒಬ್ಬ ಬಾಡಿಗಾರ್ಡ್ ಅವರನ್ನೂ ಕಾಣಬಹುದು.

Intresting News: 1947 ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದರೂ, ಈ ರಾಜ್ಯಗಳಿಗೆ ಮಾತ್ರ ಸ್ವಾತಂತ್ರ್ಯ…

ವಿಡಿಯೋದಲ್ಲಿ ಯಡಿಯೂರಪ್ಪರ ಹಾಗೆ ಕಾಣುವ ವ್ಯಕ್ತಿಯ ಬಳಿಗೆ ಮಹಿಳೆಯು ಅಪ್ಪಾಜಿ, ಅಪ್ಪಾಜಿ ಎನ್ನುತ್ತ ಬಂದು ಅಪ್ಪಾಜಿ ಅವಳಿಗೆ ಏನು ಮಾಡಿದಿರಿ? ಎನ್ನುತ್ತಾಳೆ. ಆಗ ಯಡಿಯೂರಪ್ಪರ ‘ನಾನೇನು ಮಾಡಿದೆ ಮರಿ’ ಎಂಬ ಧ್ವನಿ ಕೇಳಿಬರುತ್ತದೆ. ಅದಕ್ಕೆ ಆಮಹಿಳೆ ‘ಅವಳ ಬ್ಲೌಸ್ ಒಳಗೆ ಕೈ ಹಾಕಿದ್ರಂತೆ’ ಎಂದು ಕೇಳುತ್ತಾಳೆ. ಅದಕ್ಕೆ ಯಡಿಯೂರಪ್ಪರು ‘ಅವಳು ನನ್ನು ಮೊಮ್ಮಗಳಿದ್ದಂತೆ, ನಾನೇನು ಮಾಡಲಿಲ್ಲ. ಕೇಳು ಅವಳ ಬಳಿ ನಾನೇನು ಮಾಡಿದೆ ಎಂದು’ ಹೇಳುತ್ತಾ ಮಹಿಳೆಯ ಕೈ ಹಿಡಿದು ತಮ್ಮ ಪಕ್ಕದ ಕುರ್ಚಿಯಲ್ಲಿ ಕೂರಿಸುತ್ತಾರೆ.

Intresting Video: ಏನ್ ಚಳಿ ಗುರು; ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಸ್ಪೆಷಲ್ ಗೆಸ್ಟ್: ಚಳಿ ತಾಳಲಾರದೆ ಹೀಟರ್ ಮುಂದೆ…

ಅಲ್ಲದೆ ಒಳಗೆ ಯಾಕೆ ಇಷ್ಟೊಂದು ಪ್ರಾಬ್ಲಮ್, ಇಷ್ಟೊಂದು ಹಿಂಸೆ ಅನುಭವಿಸೋದಾ ಎಂದು ಮಹಿಳೆಯು ಏನೋ ಹೇಳುವುದು ಅಸ್ಪಷ್ಟವಾಗಿ ಕೇಳುತ್ತದೆ. ಆಗ ಯಡಿಯೂರಪ್ಪರದ್ದು ಎನ್ನಲಾದ ಧ್ವನಿಯು ನೋಡು ನನಗೂ 7 ಮಂದಿ ಮೊಮ್ಮಕ್ಕಳಿದ್ದಾರೆ. ಅವರಂತೆ ಈ ಹುಡುಯೂ ಕೂಡ. ಅವಳು ಚೂಟಿ ಇದ್ದಾಳೆ, ಚೆನ್ನಾಗಿ ಬೆಳೆಸು, ಏನೇ ಸಹಾಯ ಬೇಕಾದರೂ ನಾನು ಮಾಡುತ್ತೇನೆ ಎಂದು ಹೇಳುವುದನ್ನು ಕೇಳಬಹುದು. ಅಲ್ಲದೆ ಮತ್ತೆ ಆ ಮಹಿಳೆ ಅಲ್ಲಾ ಅಪ್ಪಾಜಿ ಅವಳ ಬ್ಲೌಸ್ ಒಳಗೆ ಕೈ ಹಾಕಿದ್ದೀರಾ? ಎಂದು ಮತ್ತೆ ಏನೋ ಕೇಳುತ್ತಾಳೆ. ಜೊತೆಗೆ ಲಾಯರ್ ವಿಚಾರ ಏನೇನೋ ಪ್ರಸ್ತಾಪ ಬರುತ್ತದೆ. ಎಲ್ಲದೂ ಅಸ್ಪಷ್ಟವಾಗಿದೆ.

https://www.facebook.com/share/v/hwUDMVZe1ratKvGf/?mibextid=w8EBqM

ಒಟ್ಟಿನಲ್ಲಿ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಇದರ ಸತ್ಯಾ ಸತ್ಯತೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

Leave A Reply

Your email address will not be published.