Home Karnataka State Politics Updates Election Commission: ಎಲೆಕ್ಷನ್ ಆಗೋವರೆಗೂ ಈ ಭಾಗದ ಕಾರ್ಯಕ್ರಮಗಳಿಗೆ ಮದ್ಯ ಸಪ್ಲೆ ಮಾಡಲು ಬೇಕು...

Election Commission: ಎಲೆಕ್ಷನ್ ಆಗೋವರೆಗೂ ಈ ಭಾಗದ ಕಾರ್ಯಕ್ರಮಗಳಿಗೆ ಮದ್ಯ ಸಪ್ಲೆ ಮಾಡಲು ಬೇಕು ಪರ್ಮಿಷನ್ – ಚುನಾವಣಾ ಆಯೋಗದಿಂದ ಹೊಸ ರೂಲ್ಸ್

Election commission

Hindu neighbor gifts plot of land

Hindu neighbour gifts land to Muslim journalist

Election Commission 2024ರ ಲೋಕಸಭೆ ಚುನಾವಣೆ(Parliament election) ದಿನಾಂಕವನ್ನು ಘೋಷಿಸಿದ್ದು ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ಶುರುವಾಗಲಿದೆ. ಈ ಬೆನ್ನಲ್ಲೇ ದೇಶಾದ್ಯಂತ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದ್ದು ಕೆಲವು ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ರೂಲ್ಸ್ ಜಾರಿಗಿದೆ.

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿಯಮವನ್ನು ತರುತ್ತಿದ್ದಾರೆ. ಅಂತೆಯೇ ಕೊಡಗು(Kodagu) ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯ ಮೂಲಕ ನೀತಿ ಸಂಹಿತೆ ಜಾರಿ ಬಗ್ಗೆ ಮಾತನಾಡಿದ್ದು, ಅದಕ್ಕೆ ಅಡಕವಾಗುವ ಅಂಶಗಳ ಕುರಿತು ತಿಳಿಸಿದ್ದಾರೆ.

ಕೊಡಗಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭದಲ್ಲಿ ಮದ್ಯ(Alcohol)ಸೇವನೆ ಸಾಮಾನ್ಯ ಸಂಗತಿ. ಅದಿಲ್ಲದೆ ಅಲ್ಲಿನ ಕಾರ್ಯಕ್ರಮಗಳು ಅಪೂರ್ಣ. ಆದರೀಗ ಎಲೆಕ್ಷನ್ ಆಗೋವರೆಗೂ ಇದಕ್ಕೂ ಕೊಂಚ ಬ್ರೇಕ್ ಬೀಳಲಿದೆ. ಅಂದರೆ ಜಿಲ್ಲಾಧಿಕಾರಿಗಳು ತಿಳಿಸಿದರೆ ಕೊಡಗಿನ ಯಾವುದೇ ಕಾರ್ಯಕ್ರಮಗಳಿಗೆ ಮದ್ಯ ಸರಬರಾಜು ಮಾಡಲು ಉದ್ದೇಶಿಸಿದರೆ ಕಡ್ಡಾಯವಾಗಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಗೃಹಪ್ರವೇಶ ಮತ್ತಿತರ ಸಣ್ಣಪುಟ್ಟ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ ಮದ್ಯಪಾನವನ್ನು ಕಾರ್ಯಕ್ರಮದಲ್ಲಿ ಬಳಸುವುದಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಡಿಸಿ ಅವರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಕೊಡಗಿನಲ್ಲಿ ಊರ ಹಬ್ಬ, ದೇವಾಲಯ ವಾರ್ಷಿಕೋತ್ಸವ ನಡೆಸುವ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ತಾಲೂಕು ದಂಡಾಧಿಕಾರಿಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಳ್ಳಬಾರದು. ಕೋವಿದಾರರು ಕೋವಿಯನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿಲ್ಲ. ಒಂದೊಮ್ಮೆ ಐದು ವರ್ಷ ಕ್ರಿಮಿನಲ್ ಪ್ರಕರಣದಲ್ಲಿ ಜೈಲುವಾಸ ಸೇರಿದ್ದರೆ ಕೋವಿಯನ್ನು ಸಮೀಪದ ಠಾಣೆಗೆ ಠೇವಣಿ ಇಡಬೇಕು. ಕೊಡಗು ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲಿ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣಾ ದಿನದ 24 ಗಂಟೆ ನಡೆಸಲಾಗುವುದು. ದಾಖಲಾತಿ ಇಲ್ಲದ ಹಣ ಮತ್ತು ವಸ್ತುಗಳನ್ನು ಸಾಗಿಸುವಂತಿಲ್ಲ ಎಂದು ಹೇಳಿದ್ದಾರೆ.