Agricultural Loan: ಕೃಷಿ ಸಾಲ ಮಾಡಿದವರಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ !!

Agricultural Loan: ದೇಶದ ಬೆನ್ನೆಲುಬಾದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಅದರಲ್ಲೂ ಕೂಡ ಕೃಷಿ ಸಾಲ(Agricultural Loan)ಮಾಡಿದವರಿಗಂತೂ ಭರ್ಜರಿ ಗುಡ್ ನ್ಯೂಸ್.

ಹೌದು, ಈ ಬಾರಿ ಕೂಡ ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕೆಂದಿದ್ದರೂ ಆದರೆ ಅಕಾಲಿಕ ಮಳೆ ಪರಿಸರ ಕಾರಣಕ್ಕೆ ಬೆಳೆ ನಾಶವಾದ ಕಾರಣ ಹಣ ಮರಳಿ ನೀಡಲು ಸಾಧ್ಯವಾಗುತ್ತಿಲ್ಲ, ಅಂತವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah)ಅವರು ಇಂದು ಬೆಳ್ಳಂ ಬೆಳಗ್ಗೆ ಶುಭ ಸುದ್ದಿ ನೀಡಿದ್ದಾರೆ.

 

ಕೆಲ ಸಮಯದ ಹಿಂದೆ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಮಾಡಿರುವಂತ ಸಾಲದ ಅಸಲು ಪಾವತಿ ಮಾಡಿದರೆ ಅದರ ಬಡ್ಡಿ ಮನ್ನಾ ಮಾಡೋದಾಗಿ ಸಿಎಂ ಸಿದ್ದರಾಮಯ್ಯ(CM Siddaramaiah)ಘೋಷಣೆ ಮಾಡಿದ್ದರು. ಅಂತೆಯೇ ಸಹಕಾರಿ ಸಂಸ್ಥೆಗಳು ಸಾಲ ನೀಡುವ ಪ್ರಮಾಣ ಅಧಿಕವಿದೆ‌. ಇಲ್ಲಿ ಸಾಲ ಪಡೆದ ರೈತರರಿಗೆ ಇದೀಗ ಸ್ವಲ್ಪ ವಿನಾಯಿತಿ ನೀಡಲು ಸರಕಾರ ಮುಂದಾಗಿದೆ.

ಅಂದಹಾಗೆ ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಸಾಲವನ್ನು 2023ರ ಡಿಸೆಂಬರ್ 31ರ ಒಳಗಾಗಿ ಮಾಡಿದ್ದ ಸಾಲಕ್ಕೆ ಅಸಲು ಮರುಪಾವತಿ ಮಾಡಿದ್ದವರಿಗೆ ಬಡ್ಡಿದರ ಮನ್ನ ಮಾಡಲು ಸರಕಾರ ಆದೇಶ ನೀಡಿದೆ. ಇದರಿಂದಾಗಿ ಸಹಕಾರಿ ಸಂಸ್ಥೆಗಳಿಗೂ ರೈತರ ಸಾಲ ಮರುಪಾವತಿ ಆಗಲಿದ್ದು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಂತಾಗುತ್ತದೆ. ಮುಂದೆ ಸಾಲ ಪಡೆಯಲು ಕೂಡ ಇದು ಅನುಕೂಲವಾಗುತ್ತದೆ.

2 Comments
  1. […] ಇದನ್ನೂ ಓದಿ: Agricultural Loan: ಕೃಷಿ ಸಾಲ ಮಾಡಿದವರಿಗೆ ಬೆಳ್ಳಂಬೆಳ… […]

Leave A Reply

Your email address will not be published.