Latest News: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ ಭಾರತ : ಸಾಮಾಜಿಕ ಮಾಧ್ಯಮ ಎಕ್ಸ್, ಯೂಟ್ಯೂಬ್‌ನಿಂದ ವಿಡಿಯೋ ಡಿಲೀಟ್
ಯೂಟ್ಯೂಬ್ ಮತ್ತು ಎಕ್ಸ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳು ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಕುರಿತ ಸಾಕ್ಷ್ಯಚಿತ್ರವನ್ನು ಭಾರತ ನಿರ್ಬಂಧಿಸಿದೆ.
ಇದು ಕೆನಡಾ ಸರ್ಕಾರದ ಅನುದಾನಿತ ಪ್ರಸಾರವಾದ ಸಿಬಿಸಿಯಲ್ಲಿ ಕಾಣಿಸಿಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೆನಡಿಯನ್ ಬ್ರಾಡ್ಕಾಸ್ಟ್ ಕಂಪನಿಯ ‘ದಿ ಫಿಫ್ತ್ ಎಸ್ಟೇಟ್ ‘ ತನಿಖಾ ಕಾರ್ಯಕ್ರಮದ 45 ನಿಮಿಷಗಳ ಸುದೀರ್ಘ ಸಂಚಿಕೆಯನ್ನು ಭಾರತವು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಿದೆ.
ಈ ಸಾಕ್ಷ್ಯಚಿತ್ರದಲ್ಲಿ ಎಸ್ ಎಫ್ ಜೆ ನಾಯಕ ಗುರ್ಪತ್ವಂತ್ ಸಿಂಗ್ ಪನ್ನೂನ್ ಕೂಡ ಕಾಣಿಸಿಕೊಂಡಿದ್ದಾನೆ. ನಿಜ್ಜರ್ ಹತ್ಯೆಯಾದ ಸುಮಾರು ಒಂಬತ್ತು ತಿಂಗಳ ನಂತರ ಮಾರ್ಚ್ 8ರಂದು ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಘೋಷಿತ ಭಯೋತ್ಪಾದಕನಾಗಿದ್ದ ನಿಜ್ಜರ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ತೋರಿಸಲಾಗಿದೆ.