Home Breaking Entertainment News Kannada Kiran Rathod: ರಾತ್ರಿ ಫೋನ್ ಮಾಡಿ ಬಾ ಅಂತಿದ್ರು, ಮಂಚ ಹತ್ತು ಅಂದ್ರು.. ಆ ದಿನ...

Kiran Rathod: ರಾತ್ರಿ ಫೋನ್ ಮಾಡಿ ಬಾ ಅಂತಿದ್ರು, ಮಂಚ ಹತ್ತು ಅಂದ್ರು.. ಆ ದಿನ ಹರಿದ ಬಟ್ಟೆಯಲ್ಲೇ ರಸ್ತೆಯಲ್ಲಿ ಬಿದ್ದಿದ್ದೆ – ಭಯಾನಕ ಸತ್ಯ ಬಿಚ್ಚಿಟ್ಟ ನಟಿ ಕಿರಣ್ ರಾಥೋಡ್ !!

Kiran Rathod

Hindu neighbor gifts plot of land

Hindu neighbour gifts land to Muslim journalist

Kiran Rathod: ಕನ್ನಡದ ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್(Kiran Rathod) ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಕ್ರಿಯರಾಗಿದ್ದಾರೆ. ಅಂತೆಯೇ ನಟಿ ಸಂದರ್ಶನವೊಂದರಲ್ಲಿ ಸಿನಿ ಕ್ಷೇತ್ರದಲ್ಲಿ ತಮಗಾದ ಕಹಿ ಅನಭವವೊಂದನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: Health Tpis: ಊಟ ಮಾಡಿದ ತಕ್ಷಣ ಬಾತ್ರೂಮ್ ಹೋಗ್ತೀರಾ ?! ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ

ಹೌದು, ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾದಲ್ಲಿ ನಟಿಸಿರುವ ಕಿರಣ್‌ ರಾಥೋಡ್‌ ಅವರು ತಮಿಳು(Tamilu) ಮತ್ತು ತೆಲುಗು(Telugu)ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಕಿರಣ್, ತಮ್ಮ ವೈಯಕ್ತಿಕ ಮತ್ತು ಸಿನಿ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಮಾಹಿತಿಗಳನ್ನು ಬಹಿರಂಗಪಡಿಸಿದ್ದು, ಕಾಸ್ಟಿಂಗ್ ಕೌಚ್ ಬಗ್ಗೆಯೂ ಮಾತನಾಡಿದ್ದಾರೆ.

ಆರಂಭದಲ್ಲಿ ಬಾಯ್‌ಫ್ರೆಂಡ್ ಮಾತು ಕೇಳಿ ಸಿನಿಮಾಗಳಿಂದ ಅಂತರ ಕಾಯ್ದುಕೊಂಡೆ. ಇದರಿಂದ ನಾಯಕಿಯಾಗುವ ಅವಕಾಶಗಳು ಕಡಿಮೆಯಾದವು. ಆ ನಂತರ ಬಾಯ್‌ಫ್ರೆಂಡ್ ಮಾತು ಕೇಳಿದ್ದು ತಪ್ಪು ಎಂದು ಅರಿವಾಯಿತು. ನಾನು ಮತ್ತೆ ನಟಿಸಲು ಆರಂಭಿಸಿದೆ ಎಂದಿದ್ದಾರೆ.

ಅಲ್ಲದೆ ಹೀಗೆ ಬಿಡುವಿನ ಬಳಿಕ ನಟನೆ ಆರಂಭಿಸಿದಾಗ ಕೆಲವರು ನನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರು. ಅವಕಾಶಕ್ಕಾಗಿ ಮಂಚ ಏರುವಂತೆ ಕೇಳಿದರು. ಇಂಥಾ ಸಮಯದಲ್ಲೇ ಲವ‌ರ್ ನನ್ನಿಂದ ದೂರಾದ. ಆ ನಂತರವು ನಾನು ಆತನನ್ನು ಮರಳಿ ಸಂಪರ್ಕಿಸಲು ಯತ್ನಿಸಿದೆ. ಆತನನ್ನು ಕರೆದೆ. ತುಂಬಾ ಒತ್ತಾಯ ಮಾಡಿ ಕರೆದಾಗ, ಕೋಪದಲ್ಲೇ ಬಂದ ಆತ ನನ್ನ ಮೇಲೆ ಹಲ್ಲೆ ಮಾಡಿದನು. ಅವನು ಹಲ್ಲೆ ಮಾಡಿದಾಗ ಈ ವೇಳೆ ಹರಿದ ಬಟ್ಟೆಯಲ್ಲೇ ನಾನು ರಸ್ತೆ ಮೇಲೆ ಬಿದ್ದಿದೆ. ಅಂದೇ ಎಲ್ಲರೂ ನಕಲಿಗಳು ಎಂದು ಅನಿಸಿತು. ಎಲ್ಲರು ನನ್ನನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಕೆಲವರು ಮಧ್ಯ ರಾತ್ರಿ ನನಗೆ ಕರೆ ಮಾಡಿ ಕರೆಯುತ್ತಿದ್ದರು ಎಂದು ನೊಂದು ಮಾತನಾಡಿದ್ದಾರೆ.