BOB: ಬ್ಯಾಂಕ್ ಆಫ್ ಬರೋಡಾದಲ್ಲಿ ಹಣ ಇಟ್ಟವರಿಗೆ ಮಹತ್ವದ ಮಾಹಿತಿ
BOB: ಬ್ಯಾಂಕ್ ಆಫ್ ಬರೋಡಾ (BoB) ಭಾರತದ ಸರ್ಕಾರಿ ಸ್ವಾಮ್ಯದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ ಉತ್ತಮ ಸಂಸ್ಥೆಯಾಗಿದೆ. ಜೊತೆಗೆ ಅತೀ ಹೆಚ್ಚು ಗ್ರಾಹಕರನ್ನೂ ಹೊಂದಿದೆ. ಇದೀಗ ತನ್ನಲ್ಲಿ FD ಇಟ್ಟ ಗ್ರಾಹಕರಿಗೆ ಬ್ಯಾಂಕ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: BJP: ಲೋಕಸಭಾ ಟಿಕೆಟ್ ಮಿಸ್- ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಹೇಳಿದ್ದೇನು?
ಹೌದು, ಬ್ಯಾಂಕ್ ಆಫ್ ಬರೋಡಾ ಇದೀಗ ಗ್ರೀನ್ ಎಫ್‌ಡಿ ಬಿಡುಗಡೆ ಮಾಡಿದೆ. ಬಾಬ್ ಅರ್ಥ್ ಗ್ರೀನ್ ಟರ್ಮ್ ಡೆಪಾಸಿಟ್ ಸ್ಕೀಮ್ ಹೆಸರಿನಲ್ಲಿ ಪ್ರಾರಂಭಿಸಲಾದ ಈ ಯೋಜನೆಯ ಉದ್ದೇಶವು ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹಣಕಾಸು ಒದಗಿಸುವುದಾಗಿದೆ. ಮಾರ್ಚ್ 11, 2024 ರಂದು ಬ್ಯಾಂಕ್ ಆಫ್ ಬರೋಡಾ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಬಾಬ್ ಅರ್ಥ್ ಗ್ರೀನ್ ಟರ್ಮ್ (BOB Earth Green Term) ಠೇವಣಿ ಹೂಡಿಕೆದಾರರಿಗೆ ಆಕರ್ಷಕ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಎಲ್ಲಿ ಈ ಹಣವನ್ನು ಬಳಸಲಾಗುತ್ತದೆ?
ಬ್ಯಾಂಕ್ ಆಫ್ ಬರೋಡಾದ ಅರ್ಥ್ ಗ್ರೀನ್ ಟರ್ಮ್ ಠೇವಣಿ ಯೋಜನೆಯು 7.15% ವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಸಂಗ್ರಹಿಸಿದ ಹಣವನ್ನು ವಿವಿಧ ಹಸಿರು ಯೋಜನೆಗಳು ಮತ್ತು ನವೀಕರಿಸಬಹುದಾದ ಇಂಧನ, ಶುದ್ಧ ಸಾರಿಗೆ, ಸುಸ್ಥಿರ ನೀರು ಮತ್ತು ತ್ಯಾಜ್ಯ ನಿರ್ವಹಣೆ ಮುಂತಾದ ಕ್ಷೇತ್ರಗಳಿಗೆ ವಿನಿಯೋಗಿಸಲಾಗುತ್ತದೆ. ಅರ್ಹ ಪರಿಸರ ಸ್ನೇಹಿ ಯೋಜನೆಗಳು ಮತ್ತು ವಲಯಗಳಿಗೆ ಹಣಕಾಸು ಒದಗಿಸಲು ನಿಯೋಜಿಸಲಾದ ಠೇವಣಿಗಳನ್ನು ಸಂಗ್ರಹಿಸುವುದು ಉದ್ದೇಶವಾಗಿದೆ ಎಂದು ಬ್ಯಾಂಕ್ ಹೇಳಿದೆ. ವಿವಿಧ ಅವಧಿಗಳಿಗೆ ಈ ಎಫ್‌ಡಿ (FD) ಯಲ್ಲಿ ಹೂಡಿಕೆ ಮಾಡಬಹುದು. ಅವುಗಳ ಬಡ್ಡಿದರಗಳೂ ವಿಭಿನ್ನವಾಗಿರುತ್ತವೆ.
ಬ್ಯಾಂಕ್ ಆಫ್ ಬರೋಡಾ ಅರ್ಥ್ ಗ್ರೀನ್ ಟರ್ಮ್ ಠೇವಣಿಯ ಬಡ್ಡಿ ದರಗಳು
ಒಂದು ವರ್ಷ – 6.75 %
1.5 ವರ್ಷಗಳು – 6.75%
777 ದಿನಗಳು – 7.15%
1111 ದಿನಗಳು – 6.4%
1717 ದಿನಗಳು – 6.4%
2201 ದಿನಗಳು – 6.4%
ಯಾರು ತೆರೆಯಬಹುದು?
ಬ್ಯಾಂಕ್ ಆಫ್ ಬರೋಡಾದ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು ಭಾರತದಾದ್ಯಂತ ಬ್ಯಾಂಕ್‌ನ ಯಾವುದೇ ಶಾಖೆಗಳ ಮೂಲಕ ಹಸಿರು ಠೇವಣಿ ತೆರೆಯಬಹುದು.
g0q4zh
5w7rb2