Dakshina Kannada (Bantwala): ರಾತ್ರಿಪಾಳಿನ ಕೆಲಸ ಮುಗಿಸಿ ಬೈಕಿನಲ್ಲಿ ಬರುತ್ತಿದ್ದ ಯುವಕ ಮರಕ್ಕೆ ಡಿಕ್ಕಿ ಹೊಡೆದು ಸಾವು

Dakshina Kannada (Bantwala): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಾರಿಪಳ್ಳದಲ್ಲಿ ಬೈಕ್‌ ಸವಾರನೊಬ್ಬ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದು, ನಂತರ ಆಸ್ಪತ್ರೆಯಲ್ಲಿ ಮೃತ ಹೊಂದಿದ ಘಟನೆಯೊಂದು ಮಂಗಳವಾರ (ಇಂದು, ಮಾ.12) ಮುಂಜಾನೆ ನಡೆದಿದೆ.

ಇದನ್ನೂ ಓದಿ: BJP Candidate Second List: ಸದಾನಂದ ಗೌಡರಿಂದ ಬೆಂಗಳೂರು ಉತ್ತರದಿಂದ ಟಿಕೆಟ್‌ ಬೇಡಿಕೆ; ವರಿಷ್ಠರು ಹೇಳಿದ್ದೇನು?

ಅಮ್ಟಾಡಿ ನಿವಾಸಿ ಅಕ್ಷಿತ್‌ (25 ವರ್ಷ) ಎಂಬಾತನೇ ಮೃತಪಟ್ಟ ಯುವಕ. ಇವರು ಮಂಗಳೂರಿನ ಖಾಸಗಿ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಇಂದು ಕೂಡಾ ಅವರು ತಮ್ಮ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ 4 ಗಂಟೆಗೆ ಹೊರಟಿದ್ದರು. ಸುಮಾರು 4.30 ರ ಸುಮಾರಿಗೆ ಮಾರಿಪಳ್ಳ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾರೆ. ನಿದ್ದೆಯ ಮಂಪರಿಯಲ್ಲಿ ಈ ಅಪಘಾತ ಸಂಭವಿಸಿದೆಯೇ ಎಂಬುವುದು ತನಿಖೆಯ ಮೂಲಕ ತಿಳಿದು ಬರಲಿದೆ.

ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಮೃತಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಮೆಲ್ಕಾರ್‌ ಟ್ರಾಫಿಕ್‌ ಪೊಲೀಸರು ಭೇಟಿ ನೀಡಿ ಪ್ರಕರಣಕ್ಕೆ ದಾಖಲು ಮಾಡಿಕೊಂಡಿದ್ದಾರೆ.

Leave A Reply

Your email address will not be published.