Home Interesting BJP: ಚುನಾವಣೆ ಹೊತ್ತಲ್ಲೇ ಕಮಲ ಪಡೆಗೆ ದೊಡ್ಡ ಆಘಾತ – ಬಿಜೆಪಿ ತೊರೆದು ಕಾಂಗ್ರೆಸ್...

BJP: ಚುನಾವಣೆ ಹೊತ್ತಲ್ಲೇ ಕಮಲ ಪಡೆಗೆ ದೊಡ್ಡ ಆಘಾತ – ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಪ್ರಬಲ ಸಂಸದ !!

BJP

Hindu neighbor gifts plot of land

Hindu neighbour gifts land to Muslim journalist

BJP: ಲೋಕಸಭಾ ಚುನಾವಣೆ ಹೊತ್ತಲ್ಲೇ ಹರಿಯಾಣದ ಹಿಸಾರ್‌ ಕ್ಷೇತ್ರದ ಬಿಜೆಪಿ(BJP) ಸಂಸದ ಬ್ರಿಜೇಂದ್ರ ಸಿಂಗ್‌(Brojendra singh) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Deadly Accident: ಕಾರಿನ ಸ್ಟೆಪ್ನಿ ಬದಲಾಯಿಸುತ್ತಿದ್ದವರಿಗೆ ಗುದ್ದಿದ ಕಾರು; ಸ್ಥಳದಲ್ಲೇ ಆರು ಮಂದಿ ಸಾವು, ಆರು ಮಂದಿಗೆ ಗಾಯ

ತಮ್ಮ ರಾಜೀನಾಮೆ ಕುರಿತು ಬಹಿರಂಗಪಡಿಸಿದ ಬಳಿಕ ಬ್ರಿಜೇಂದ್ರ ಅವರು ನವದೆಹಲಿಯಲ್ಲಿರುವ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿ ಕಾಂಗ್ರೆಸ್‌ ಸೇರಿದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಜಯ್‌ ಮಾಕನ್‌, ಮುಕುಲ್‌ ವಾಸ್ನಿಕ್‌, ದೀಪಕ್‌ ಬಬಾರಿಯಾ ಉಪಸ್ಥಿತರಿದ್ದರು.

ಅಂದಹಾಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷಕ್ಕೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೇಂದ್ರ ಸಿಂಗ್ ಅವರು ಜೆಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್‌ನಲ್ಲಿದ್ದ ಭವ್ಯಾ ಬಿಷ್ಣೋಯ್ ಅವರನ್ನು ಸೋಲಿಸಿ ಹಿಸ್ಸಾರ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದರು. ಇನ್ನು ಹಿಸಾರ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬ್ರಿಜೇಂದ್ರ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.