Rakhi Sawant: ಬುರ್ಖಾದೊಳಗೆ ಬಿಕನಿ ಹಾಕಿ ಸಿನಿಮಾ ಆಡಿಷನ್’ಗೆ ಬಂದ ಸೂಪರ್ ಡೂಪರ್ ನಟಿ !! ಮುಂದೇನಾಯ್ತು?

Raki sawant: ಸದಾ ವಿವಾದಗಳ ಮೂಲಕ ಸುದ್ದಿಯಾಗುವ ನಟಿ ರಾಖಿ ಸಾವಂತ್ (Rakhi Sawant) ಆಗಾಗ ಏನಾದರೂ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅಂತೆಯೇ ಇದೀಗ ಈ ನಟಿ ಮೊದಲ ಸಲ ಸಿನಿಮಾ ಆಡಿಷನ್ ಗೆ ಹೇಗೆ ಬಂದಿದ್ದೆ ಎಂಬುದು ರಿವೀಲ್ ಆಗಿದೆ.

ಹೌದು, ರಾಖಿ ಸಾವಂತ್ ಫಸ್ಟ್ ಟೈಂ ಕ್ಯಾಮೆರಾ ಎದುರಿಸಿದ ಸಮಯದ ಆಸಕ್ತಿಕರ ಸಂಗತಿಯೊಂದನ್ನು ಚಿತ್ರದ ಸಹ ನಿರ್ದೇಶಕಿ ಫರಾ ಖಾನ್ ತೆರೆದಿಟ್ಟಿದ್ದಾರೆ. ಆಡಿಶನ್‌ಗೆ ಬಂದಾಗ ರಾಕಿ ಸಾವಂತ್ ಬುರ್ಖಾ ಧರಿಸಿದ್ದರಂತೆ. ‘ಹಾಟ್ ಹುಡುಗಿಯ ಪಾತ್ರ’ ಆಗಿದ್ದರಿಂದ ಅಸಿಸ್ಟೆಂಟ್ ಜಾಗರೂಕರಾಗಿದ್ದರು. ನಂತರ ಅವಳು ಬುರ್ಕಾವನ್ನು ತೆಗೆದಳು ಮತ್ತು ಒಳಗೆ ಬಿಕಿನಿಯಲ್ಲಿದ್ದ ಆಕೆಯನ್ನು ನೋಡುತ್ತಲೇ ಇಡೀ ಕ್ಯಾಮೆರಾ ನಡುಗುತ್ತಿತ್ತು ಎಂದು ಫರಾ ವಿವರಿಸಿದ್ದಾರೆ

ಈ ಬಗ್ಗೆ ಮಾತನಾಡಿದ ಅವರು ಮೈ ಹೂಂ ನಾ(My huna) ರಾಖಿಗೆ ಚೊಚ್ಚಲ ಚಿತ್ರ. ಮೊದಲು ಬೇರೆ ನಟಿ ಈ ಸಿನಿಮಾಕ್ಕೆ ಆಯ್ಕೆಯಾಗಿದ್ದರು. ಆದರೆ ನಟಿ ತಾಯಿ ಚಿತ್ರತಂಡಕ್ಕೆ ಕಂಡಿಶನ್ ಮೇಲೆ ಕಂಡಿಶನ್ ಹಾಕುತ್ತಾ ಹೋದರು. ಹೀಗಾಗಿ ಹೀರೋಯಿನ್ ಬದಲಿಸಬೇಕಾಯ್ತು. ಆಗ ಈ ಪಾತ್ರಕ್ಕಾಗಿ ಬೇರೆ ಯಾವ ನಟಿಯನ್ನು ಆಡಿಷನ್ ಮಾಡಲಾಗಿದೆ ಎಂದಾಗ ನೆನಪಾಗಿದ್ದು ಆಗ ಬುರ್ಖಾ ಧರಿಸಿ ಬಂದಿದ್ದ ರಾಖಿ. ಡಾರ್ಜಿಲಿಂಗ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾದ ಎರಡು ದಿನಗಳ ನಂತರ ರಾಖಿ ಸಾವಂತ್ ಮೈ ಹೂಂ ನಾ ಶೂಟಿಂಗ್‌ಗೆ ಸೇರಿಕೊಂಡರು.

ಅಲ್ಲದೆ ರಾಖಿಯ ಅವತಾರ ನೋಡಿ ನಾವು ಚಳಿ ಇದೆ ಸ್ವೆಟರ್ ಹಾಕ್ಕೋ ಎಂದರೆ ಆಕೆಗೆ ಮೈ ತೋರಿಸಬೇಕಿತ್ತು. ಕಡೆಗೆ, ನೀನು ಬಟ್ಟೆ ಹಾಕಿದಾಗಲೂ ಸುಂದರವಾಗಿ ಕಾಣುತ್ತಿ ಎಂದೆಲ್ಲ ಪುಸಲಾಯಿಸಿ ಮೈ ಮುಚ್ಚಿಸಿದೆವು ಎಂದು ಆ ದಿನವನ್ನು ನೆನೆಸಿಕೊಂಡಿದ್ದಾರೆ ಫರಾ.

Leave A Reply

Your email address will not be published.