Arecanut : ಬೆಳ್ಳಂಬೆಳಗ್ಗೆಯೇ ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್!!

Arecanut: ಅಡಕೆ ಮಾರಾಟ ಆರಂಭವಾಗಿದ್ದು ರೈತರ ಮುಖದಲ್ಲಿ ಸಂತಸ ಮಡುಗಟ್ಟಿದೆ. ಆದರೆ ಈ ಸಂದರ್ಭದಲ್ಲಿಯೇ ಶ್ರೀಲಂಕಾದಿಂದ 5 ಲಕ್ಷ ಟನ್‌ ಅಡಕೆ ಆಮದಿಗೆ ಖಾಸಗಿ ಕಂಪನಿಯೊಂದು ಮುಂದಾಗಿದ್ದು, ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.

 

ಹೌದು, ಅಡಕೆ(Arecanut)ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಎಸ್ ರಾಂ ಅಂಡ್ ಎನ್ ರಾಂ ಗ್ರೂಪ್ ಕಂಪೆನಿ ಶ್ರೀಲಂಕಾ(Shreelanka)ದಿಂದ ಭರ್ಜರಿ 5 ಲಕ್ಷ ಟನ್‌ ಅಡಕೆಯನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್‌ ಸ್ಟಾರ್ ಪ್ರೈವೇಟ್‌ ಲಿಮಿಟೆಡ್‌ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪೆನಿಯು ಶುಕ್ರವಾರ ತಿಳಿಸಿದೆ.

 

ಅಂದಹಾಗೆ ಈ ಹಿಂದೆ ವಿದೇಶದಿಂದ ಅಡಕೆ ಆಮದು ಮಾಡಿಕೊಂಡಿದ್ದಾಗ, ಅಡಿಕೆ ದರ ಕುಸಿದಿತ್ತು. ಇದೀಗ ಮತ್ತೊಮ್ಮೆ ಅಡಕೆ ಆಮದು(Import)ಬಗ್ಗೆ ಒಪ್ಪಂದಗಳು ನಡೆದಿದೆ. ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್ ಕಂಪನಿ ಮುಂದಾಗಿದೆ. ಇದು ಅಡಕೆ ಬೆಳೆಗಾರರಿಗೆ ಬೆಲೆ ಕುಸಿತದ ಆತಂಕ ಮೂಡಿಸಿದೆ.

 

ದೇಶದಲ್ಲಿ ಅಡಕೆ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ದೇಶದ ಹಲವು ಸಂಪ್ರದಾಯ ಹಾಗೂ ಸಮಾರಂಭಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲದೆ ಭಾರತದಲ್ಲಿಯೇ ಸಾಕಷ್ಟು ಅಡಿಕೆ ಬೆಳೆಯಲಾಗುತ್ತದೆ. ಇದರೊಂದಿಗೆ ಕೆ. ಜಿಗೆ 351 ರು.ಗಿಂತ ಕಡಿಮೆ ಇಲ್ಲದಂತೆ ಅಡಕೆ (ಸುಪಾರಿ) ಆಮದಿಗೆ ಮಾತ್ರವೇ ಕೇಂಧ್ರ ಸರ್ಕಾರ ಅವಕಾಶ ನೀಡಿದೆ. ಆದಾಗ್ಯು ಇದು ಅಡಿಕೆ ದರ ಕುಸಿತದ ಆತಂಕ ಮೂಡಿಸಿದೆ.

ಇದನ್ನೂ ಓದಿ : ಈ ದ್ವೀಪಕ್ಕೆ ಭೇಟಿ ನೀಡಿದರೆ ನಿಮಗೆ ಸಿಗಲಿದೆ ಕೋಟಿ ಕೋಟಿ ರೂಪಾಯಿ,ಯಾರಿಗುಂಟು, ಯಾರಿಗಿಲ್ಲ? ಬನ್ನಿ ತಿಳಿಯೋಣ

Leave A Reply

Your email address will not be published.