Yadagiri: ಕೊನೇ ಕ್ಷಣದಲ್ಲಿ ಏಕಾಏಕಿ ರದ್ದಾಯ್ತು ‘ಸರಿಗಮಪ-20 ಗ್ರಾಂಡ್ ಫಿನಾಲೆ’ – ಕಾರಣವೇನು?

Yadagiri: ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರಿಗಮಪ-20(Sa ri ga ma pa) ರಿಯಾಲಿಟಿ ಶೋನ ಗ್ರಾಂಡ್ ಫಿನಾಲೆಯು ಕೊನೆ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಲಾಗಿದೆ.

ಇದನ್ನೂ ಓದಿ: PM Ujwala Yojana: ಮಹಿಳಾ ದಿನಾಚರಣೆ ಸಂದರ್ಭವೇ 10 ಕೋಟಿ ಮಹಿಳೆಯರಿಗೆ ಸರ್ಕಾರದಿಂದ ಬಹು ದೊಡ್ಡ ಉಡುಗೊರೆ; ಉಜ್ವಲ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಘೋಷಣೆ

ಹೌದು, ನಿನ್ನೆ ದಿನ ಮಧ್ಯಾಹ್ನದಿಂದಲೇ ಯಾದಗಿರಿಯ(Yadagiri) ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನರು ಸೇರಿದ್ದರು. ಆದರೆ ಕೊನೇ ಕ್ಷಣಕ್ಕೆ ಕಾರ್ಯಕ್ರಮ ರದ್ದು ಆಗಿರುವ ಬಗ್ಗೆ ಯಾದಗಿರಿ ಡಿಸಿ ಸುಶೀಲಾ ಬಿ ಮತ್ತು ಎಸ್ಪಿ ಸಂಗೀತಾ ಜಿ ಮಾಹಿತಿ ನೀಡಿದ್ದಾರೆ. ಹೀಗಾಗಿ ರಿಯಾಲಿಟಿ ಶೋ ನೋಡಲು ಬಂದಿದ್ದ ಸಾವಿರಾರು ಪ್ರೇಕ್ಷಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲದೆ ರೀತಿಯಾಗಿ ಬೇರೆ ಬೇರೆ ಜಿಲ್ಲೆಗಳಿಂದ ಕಾರ್ಯಕ್ರಮ ನೋಡಲು ಬಂದಿದ್ದ ಸಾವಿರಾರು ಜನರಿಗೂ ತುಂಬಾ ಬೇಸರವಾಗಿದೆ. ಆದರೆ ಯಾಕೆ ಕಾರ್ಯಕ್ರಮ ರದ್ಧುಪಡಿಸಲಾಗಿದೆ ಎಂದು ತಿಳಿದುಬಂದಿಲ್ಲ.

ಕಾರಣವೇನಿರಬಹುದು?

ಮೂಲಗಳ ಪ್ರಕಾರ ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಮತ್ತು ಹಿರಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದೇ ಶೋ ರದ್ದಾಗಲು ಕಾರಣವೆನ್ನಲಾಗುತ್ತಿದೆ. ಬೆಂಗಳೂರಿನ ಗುಂಡೂರಾವ್ ಅವರನ್ನು ಆಹ್ವಾನಿಸಿ ಸ್ಥಳೀಯ ಕಾಂಗ್ರೆಸ್ ನಾಯಕ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ್ ಅವರನ್ನು ಕಡೆಗಣಿಸಿದ ಕಾರಣಕ್ಕೆ ಸಾವಿರಾರು ಜನರು ಸೇರಿದ್ದ sa re ga ma pa ಕಾರ್ಯಕ್ರಮ ರದ್ದಾಯ್ತಾ? ಎಂದು ಪ್ರಶ್ನಿಸಿದ್ದಾರೆ

ಇನ್ನು ಯಾದಗಿರಿ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಸಂಚಾರ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಗುಪ್ತಚರ ಇಲಾಖೆ ಮೂಲಕ ಆಡಳಿತಕ್ಕೆ ಮಾಹಿತಿ ರವಾನೆಯಾಗಿದೆ ಇದರಿಂದ ಜಿಲ್ಲೆಯಾದ್ಯಂತ ಹೈ ಅಲರ್ಟ್ ಸೂಚನೆಗಳು ಬಂದಿವೆ ಎಂಬ ಮಾತು ಕೇಳಿ ಬಂದಿವೆ. ಹೀಗಾಗಿ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಗ್ರ್ಯಾಂಡ್ ಫೀನಾಲೆ ರದ್ದು ಮಾಡಿರಬಹುದು

Leave A Reply

Your email address will not be published.