Putturu: ಲಾರಿ ಬ್ರೇಕ್‌ಫೈಲ್‌ ಘಟನೆ; ಚಾಲಕನ ಜಾಣ್ಮೆಯಿಂದ ತಪ್ಪಿದ ದೊಡ್ಡ ದುರಂತ

Share the Article

Putturu: ಪುತ್ತೂರಿನ ಪೇಟೆಯಲ್ಲಿ ಲಾರಿಯೊಂದು ಬ್ರೇಕ್‌ಫೈಲ್‌ ಆಗಿದ್ದು, ಚಾಲಕನ ಜಾಣ್ಮೆಯಿಂದ ಹಲವು ಪಾರಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಬ್ರೇಕ್‌ಫೈಲ್‌ಗೊಳಗಾಗಿದ್ದು, ಅಶ್ವಿನಿ ಸರ್ಕಲ್‌ ಬಳಿ ಬೇಕರಿಯೊಂದಕ್ಕೆ ನುಗ್ಗುವುದರಲ್ಲಿತ್ತು. ಲಾರಿ ಬೇಕರಿಯ ಬೋರ್ಡ್‌ಗೆ ಗುದ್ದಿದ್ದು, ಚಾಲಕನ ಜಾಣ್ಮೆಯಿಂದ ಲಾರಿಯನ್ನು ಕೂಡಲೇ ನಿಲ್ಲಿಸಿದ್ದಾರೆ.

ಇದನ್ನೂ ಓದಿ: Ayodhya: ನಳಿನ್‌ ಕುಮಾರ್‌ ಜೊತೆ ಅಯೋಧ್ಯೆಯಲ್ಲಿ ಫೋಟೋಶೂಟ್‌ ಮಾಡಿದ ಖರ್ಗೆ ಆಪ್ತ ಮಂಜುನಾಥ ಭಂಡಾರಿ

ಈ ಘಟನೆ ಮಾ.6 ರಂದು ನಡೆದಿದೆ. ಸಮಯ ಸಂಜೆಯಾಗಿದ್ದರಿಂದ ಆ ಸ್ಥಳದಲ್ಲಿ ಜನ ಸೇರುತ್ತಿದ್ದರು. ಪೊಲೀಸರು, ಜನರು ಹೆಚ್ಚಾಗಿ ಅಲ್ಲಿ ಇರುತ್ತಿದ್ದರು, ಆದರೆ ಘಟನೆ ನಡೆದ ದಿನ ಅಂದು ಆ ಸಮಯದಲ್ಲಿ ಅದೃಷ್ಟವಶಾತ್‌ ಯಾರೂ ಇಲ್ಲದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ.

Leave A Reply