Ayodhya: ನಳಿನ್‌ ಕುಮಾರ್‌ ಜೊತೆ ಅಯೋಧ್ಯೆಯಲ್ಲಿ ಫೋಟೋಶೂಟ್‌ ಮಾಡಿದ ಖರ್ಗೆ ಆಪ್ತ ಮಂಜುನಾಥ ಭಂಡಾರಿ

Mangaluru: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ, ದಕ್ಷಿಣ ಕನ್ನಡ ಕಾಂಗ್ರೆಸ್‌ ಹಿರಿಯ ಮುಖಂಡ, ಎಂಎಲ್ಸಿ ಮಂಜುನಾಥ ಭಂಡಾರಿ ಮತ್ತು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜೊತೆಯಾಗಿ ಫೋಟೋಶೂಟ್‌ ಮಾಡಿಕೊಂಡ ಘಟನೆ ನಡೆದಿದೆ. ಇದರ ಫೋಟೋ ಕೂಡಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Dakshina kannada: ಪಾಲ್ತಾಡು ಸಮೀಪದ ಕಾಪುತಕಾಡು ಶ್ರೀ ರಾಜಗುಳಿಗ ಸಾನಿಧ್ಯ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯ ಭೇಟಿಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ತಮ್ಮ ಕುಟುಂಬ ಸಮೇತರಾಗಿ ಹೋಗಿದ್ದು, ಅಲ್ಲಿ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ ಶ್ರೀ ಬಾಲರಾಮನಿಗೆ ಚಾಮರ ಸೇವೆ ಮಾಡಿದರು. ಇವರೊಂದಿಗೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಇದ್ದರು.

ಮಲ್ಲಿಕಾರ್ಜುನ ಖರ್ಗೆ ಆಪ್ತ ಮಂಜುನಾಥ ಭಂಡಾರಿ ಕೂಡಾ ಅಯೋಧ್ಯೆಗೆ ತೆರಳಿದ್ದು, ಅಲ್ಲಿ ದೇವಸ್ಥಾನದ ಹೊರಗೆ ಮತ್ತು ಒಳಗೆ ಕಟೀಲ್‌, ಸುದರ್ಶನ್‌ ಜೊತೆ ಫೋಟೋಶೂಟ್‌ ಮಾಡಿಸಿಕೊಂಡ ಫೋಟೋ ವೈರಲ್‌ ಆಗಿದೆ.

1 Comment
  1. […] ಇದನ್ನೂ ಓದಿ: Ayodhya: ನಳಿನ್‌ ಕುಮಾರ್‌ ಜೊತೆ ಅಯೋಧ್ಯೆಯಲ್ಲಿ … […]

Leave A Reply

Your email address will not be published.