Home Breaking Entertainment News Kannada Janhavi Kapoor: ‘ನೆಪೋಟಿಸಂ’ ಕುರಿತಾಗಿ ಎದುರಿಸುತ್ತಿರುವ ಟೀಕೆಗೆ ಉತ್ತರಿಸಿದ ಜಾನ್ಹವಿ ಕಪೂರ್

Janhavi Kapoor: ‘ನೆಪೋಟಿಸಂ’ ಕುರಿತಾಗಿ ಎದುರಿಸುತ್ತಿರುವ ಟೀಕೆಗೆ ಉತ್ತರಿಸಿದ ಜಾನ್ಹವಿ ಕಪೂರ್

Janhavi Kapoor

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನ ಸ್ಟಾರ್ ಬ್ಯೂಟಿ ಶ್ರೀದೇವಿ ಅವರು ಒಂದು ಕಾಲದಲ್ಲಿ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದವರು.  ಆದರೆ ಅವರ ಮಗಳಾದ ಜಾಹ್ನವಿ ಕಪೂರ್ ಇಂದು ತಮ್ಮ ನಟನೆ ಹಾಗೆಯೇ ನಿಪೋಟಿಸಂನ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ.

ಇದನ್ನೂ ಓದಿ: Deadly Accident: ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸೇರಿ ಒಂದೇ ಕುಟುಂಬದ 5 ಮಂದಿಯ ದಾರುಣ ಸಾವು

ಜಾನ್ವಿ ಕಪೂರ್ ಅವರು 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಸಂದರ್ಶನದಲ್ಲಿ, ಟೀಕೆಯನ್ನು ನಿಭಾಯಿಸುವ ವಿಧಾನದ ಬಗ್ಗೆ ಜಾನ್ವಿ ಅವರನ್ನು ಕೇಳಿದಾಗ, ಅವರು ಹೀಗೆ ಹೇಳಿದ್ದರು.

” ನನಗೆ ನಟನೆ ಬಗ್ಗೆ ಸಾಕಷ್ಟು ಆಸಕ್ತಿ, ಗೌರವವಿದೆ. ಬೇರೆಯವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ನಾನು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಕೇವಲ ನನ್ನ ಕೆಲಸವನ್ನಷ್ಟೇ ನಾನು ಮಾಡುತ್ತೇನೆ. ಅಂತಿಮವಾಗಿ ನಾನು ಎಷ್ಟರಮಟ್ಟಿಗೆ ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬುದರ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.

ಇನ್ನು ಕೆಲವೊಮ್ಮೆ ನಾವು ಎಷ್ಟೇ ಒಳ್ಳೆಯ ರೀತಿಯಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಸಹ ನೆಪೋಟಿಸಂ ಹೆಸರಿನಲ್ಲಿ ನಮ್ಮನ್ನು ದೋಷಿಸುತ್ತಾರೆ. ಸುಮ್ಮ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ದ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಅದು ನಿಜಕ್ಕೂ ತುಂಬಾ ಬೇಸರ ತರಿಸುತ್ತದೆ. ಆದರೂ ನಾನು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನನ್ನ ಪಾತ್ರ ಹಾಗೆ ಅಭಿನಯದ ಬಗ್ಗೆ ಮಾತ್ರ ಯೋಚಿಸುವುದಾಗಿ ತಿಳಿಸಿದ್ದಾರೆ.

ವೈಯಕ್ತಿಕವಾಗಿ ನಾವು ಎದುರಿಸುವ ಸಮಸ್ಯೆಗಳ ಬಗ್ಗೆ ನಮ್ಮನ್ನು ಟೀಕೆ ಮಾಡುವವರಿಗೆ ತಿಳಿಯುವುದೇ ಇಲ್ಲ. ಈ ಎಲ್ಲದರಿಂದ ಅನೇಕ ಬಾರಿ ಮಾನಸಿಕ ಒತ್ತಡವನ್ನು ಎದುರಿಸಿದ್ದಾಗಿ ಎಂಬುದಾಗಿ ತಿಳಿಸಿದ್ದಾರೆ‌.