PM Modi: ಪ್ರಧಾನಿ ಮೋದಿ ಹಿಂದೂ ಅಲ್ಲ !! ಅರೆ ಏನಿದು ಶಾಕಿಂಗ್ ನ್ಯೂಸ್?

PM Modi: ಪ್ರಧಾನಿ ಮೋದಿ ಹಿಂದೂ ಅಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಅವರು ಮೋದಿ ತಾಯಿಯ ನಿಧನವನ್ನು ಉಲ್ಲೇಖ ಮಾಡಿದ್ದಾರೆ.

PM Modi

ಹೌದು, ಮೋದಿಯವರು(PM Modi) ತಾಯಿ ಹೀರಾಬೆನ್ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ. ಹೀಗಾಗಿ ಮೋದಿ ಹಿಂದೂ ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಮೋದಿ ಟೀಕಿಸುವ ಭರದಲ್ಲಿ ಲಾಲೂ ಪ್ರಸಾದ್ ಯಾದವ್(Lalu prasad yadav) ತಾಯಿಯಿಯ ನಿಧನದ ವಿಚಾರ ತಂದು ವಿವಾದ ಎಬ್ಬಿಸಿದ್ದಾರೆ.

ಇದನ್ನೂ ಓದಿ: Parliment election: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆದ್ರೂ ಕರ್ನಾಟಕದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಇಲ್ಲ !!

ಅಂದಹಾಗೆ ಇಂಡಿಯಾ ಮೈತ್ರಿ ಕೂಟ ಪಕ್ಷಗಳು ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪ್ರಧಾನಿ ಮೋದಿ ಹಾಗೂ ಬಿಜೆಪಿ(BJP) ವಿರುದ್ದ ಹರಿಹಾಯ್ದಿದ್ದಾರೆ. ಮೋದಿ ಹಿಂದೂ ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ? ಎಂಬ ಪ್ರಶ್ನೆ ಎಬ್ಬಿಸಿದ್ದಾರೆ. ಇದೀಗ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave A Reply

Your email address will not be published.