Kaup: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಯೊಳಗೆ ಸಿಲುಕಿ ಮೃತ
Udupi: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಾಕಿಕೊಂಡು ಸಾವನ್ನಪ್ಪಿರುವ ಘಟನೆಯೊಂದು ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಇದನ್ನೂ ಓದಿ: K S Eshwarappa: ಸದ್ಯದಲ್ಲೇ ಈ ಎರಡು ದೇವಾಲಯಗಳು ಮಸೀದಿ ಮುಕ್ತ ಆಗಲಿದೆ – ಬಿಜೆಪಿ ನಾಯಕ ಈಶ್ವರಪ್ಪ ಅಚ್ಚರಿ ಸ್ಟೇಟ್ಮೆಂಟ್!!
ಕಾಪು ಪೊಲಿಪು ನಿವಾಸಿ ಕಿಶೋರ್ (29) ಮೃತ ವ್ಯಕ್ತಿ.
ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತ ಹೊಂದಿದ್ದಾರೆ. ಕಯಾಕವೊಂದು ಸಮುದ್ರದಲ್ಲಿ ತೇಲುತ್ತಿದ್ದನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಶವ ಕಂಡು ಬಂದಿದ್ದು, ದಡಕ್ಕೆ ಕಯಾಕ್ ಹಾಗೂ ಶವವನ್ನು ತಂದಿದ್ದಾರೆ.