BJP MP : ಬಿಜೆಪಿ ಹಾಲಿ ಸಂಸದನಿಂದ ರಾಜಕೀಯ ನಿವೃತ್ತಿ ಘೋಷಣೆ- ಡೇಟ್ ಕೂಡ ಫಿಕ್ಸ್!!

BJP MP: ಬಿಜೆಪಿ ಹಿರಿಯ ನಾರಕ, ಚಾಮರಾಜನಗರ(Chamarajanagar) ಹಾಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರು ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ.

ಇದನ್ನೂ ಓದಿ: JNU Clash: ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಹೊಡೆದಾಟ; ಹಲವು ವಿದ್ಯಾರ್ಥಿಗಳಿಗೆ ಗಾಯ, ಉದ್ವಿಗ್ನತೆ

BJP MP

ಹೌದು, ಕೆಲವು ತಿಂಗಳ ಹಿಂದೆ ಬಿಜೆಪಿ ಸಂಸದ(BJP MP)ಶ್ರೀನಿವಾಸ್ ಪ್ರಸಾದ್(Shrinvas prasad) ಅವರು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಈಗ ಮಾರ್ಚ್ 17ರಂದು ಅಧಿಕೃತವಾಗಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದು ಮಾ.17ಕ್ಕೆ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಅಂದೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.

ಇನ್ನು ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಮಾರ್ಚ್ 17ರಂದು ನಿವೃತ್ತಿ ಹೊಂದುತ್ತಿರುವ ದಿನ ಅಂದು ಅವರ ಅಭಿಮಾನಿಗಳಿಂದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.

2 Comments
  1. […] ಇದನ್ನೂ ಓದಿ : ಬಿಜೆಪಿ ಹಾಲಿ ಸಂಸದನಿಂದ ರಾಜಕೀಯ ನಿವೃತ್ತಿ… […]

  2. […] ಇದನ್ನೂ ಓದಿ : ಬಿಜೆಪಿ ಹಾಲಿ ಸಂಸದನಿಂದ ರಾಜಕೀಯ ನಿವೃತ್ತಿ… […]

Leave A Reply

Your email address will not be published.