ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ : ನಾಲ್ವರಿಗೆ ತೀವ್ರ ಗಾಯ

Share the Article

Bangalore :ಬೆಂಗಳೂರಿನ (Bangalore)ವೈಟ್ ಫೀಲ್ಡ್ ಬ್ರೂಕ್ಫೀಲ್ಡ್ ಪ್ರದೇಶದ ಜನಪ್ರಿಯ ದಿ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ಕು ಗಾಯಗೊಂಡಿದ್ದಾರೆ.

 

ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ, ಬೆಂಕಿನಂದಿಸಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಮಹಿಳೆ ಮಹಿಳೆ ಮತ್ತು ಮೂವರು ಸಿಬ್ಬಂದಿ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 1:30 ರಿಂದ 2 ಗಂಟೆಯ ನಡುವೆ ಸ್ಫೋಟ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ

 

“ನಮ್ಮ ಸಿಬ್ಬಂದಿ ತಲುಪುವ ಹೊತ್ತಿಗೆ, ಯಾವುದೇ ಬೆಂಕಿ ಇರಲಿಲ್ಲ” ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದರು. “ಇದು 30 ಸೆಕೆಂಡುಗಳಳೂಳಗೆ ಸ್ಫೋಟ ಸಂಭವಿಸಿದೆ ಎಂದು ತೋರುತ್ತದೆ. ಎಲ್ಪಿಜಿ ಸೋರಿಕೆಯಾಗಿರುವ ಸಾಧ್ಯತೆ ಇದೆ. ಅದನ್ನು ಖಚಿತಪಡಿಸಲಾಗುತ್ತಿದೆ “ಎಂದು ಹೇಳಿದರು.

 

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ .

ಇದನ್ನೂ ಓದಿ : ಬಿಜೆಪಿ ಹಾಲಿ ಸಂಸದನಿಂದ ರಾಜಕೀಯ ನಿವೃತ್ತಿ ಘೋಷಣೆ,ಡೇಟ್ ಕೂಡ ಫಿಕ್ಸ್!!

Leave A Reply