Kartik-Namrata: ಬಿಗ್ ಬಾಸ್ ಕಾರ್ತಿಕ್ ಮತ್ತು ನಮ್ರತಾ ಮದುವೆ? ಸಡನ್ ಆಗಿ ಹಸೆಮಣೆ ಮೇಲೆ ಕಾಣಿಸಿದ ಜೋಡಿ!!

Karthik-Namrata: ಕನ್ನಡ ಬಿಗ್ ಬಾಸ್ ಸೀಸನ್-10 ವಿನ್ನರ್ ಕಾರ್ತಿಕ್ ಹಾಗೂ ನಮ್ರತಾ ಗೌಡ(Karthik-Namrata) ಅಭಿಮಾನಿಗಳಿಗೆ ಬಿಗ್ ಸರ್ಪೈಸ್ ನೀಡಿದ್ದು ಮದುವೆ ಫೋಷಾಕಿನಲ್ಲಿ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದರಿಂದಾಗಿ ಈ ಜೋಡಿ ಹಸೆಮಣೆ ಏರಿದ್ದಾರಾ? ಎಂಬ ಸುದ್ದಿಯೊಂದು ಗುಲ್ಲೆಬ್ಬಿದೆ. ಹಾಗಿದ್ರೆ ಏನಪ್ಪಾ ಇದರ ಅಸಲಿ ವಿಚಾರ?

ಇದನ್ನೂ ಓದಿ: K.Shivaram: ʻಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ನಟ- ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ

ಹೌದು, ಹೊರಗೆ ಬಂದ ಮೇಲೆ ಈಗ ಅಚಾನಕ್ಕಾಗಿ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಹಸೆಮಣೆ ಏರಿದ್ದಾರೆ! ಇಬ್ಬರೂ ಮದುವೆ ಆಗಿಬಿಟ್ಟರೆ ಎಂದು ಶಾಕ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದ್ರೆ ಶಾಕ್ ಆಗುವಂತಿಲ್ಲ. ಯಾಕೆಂದ್ರೆ ಅಸಲಿ ವಿಚಾರ ಇಲ್ಲಿದೆ.

ಕಾರ್ತಿಕ್ ಮತ್ತು ನಮ್ರತಾ ಇಬ್ಬರೂ ಹಸೆಮಣೆ ಏರಿರುವುದು ಜಾಹೀರಾತೊಂದರ(Advertisement)ಚಿತ್ರೀಕರಣಕ್ಕಾಗಿ. ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಅವರುಗಳು ಚಿನ್ನಾಭರಣದ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಹೀರಾತು ಚಿತ್ರೀಕರಣದ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಅಂದಹಾಗೆ ಖ್ಯಾತ ಉದ್ಯಮಿ, ರಾಜಕಾರಣಿ ಟಿಎ ಶರವಣ(T A Sharavana) ಅವರ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಬ್ರ್ಯಾಂಡ್ಗಾಗಿ ಕಾರ್ತಿಕ್ ಹಾಗೂ ನಮ್ರತಾ ಒಟ್ಟಿಗೆ ಈ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ. ಇಬ್ಬರೂ ವಧು-ವರರಂತೆ ವೇಷ ತೊಟ್ಟು ಮೈತುಂಬ ಚಿನ್ನದ ಆಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಟಿಎ ಶರವಣ ಸಹ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಆಶೀರ್ವಾದ ಮಾಡುವ ದೃಶ್ಯದಲ್ಲಿ ಹಿರಿಯರಾಗಿ ಅವರು ಕಾಣಿಸಿಕೊಂಡಿದ್ದಾರೆ.

Leave A Reply

Your email address will not be published.