Mangalore: ಏಣಿಯಲ್ಲಿ ನಿಂತು ಪೈಂಟ್‌ ಮಾಡುತ್ತಿದ್ದ ಯುವಕ ಜಾರಿಬಿದ್ದು ಸಾವು

Mangaluru: ಮನೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಫೈಂಟಿಂಗ್‌ ಮಾಡುತ್ತಿದ್ದ ಯುವಕನೋರ್ವ ಆಯತಪ್ಪಿ ಏಣಿಯ ಜೊತೆಯೇ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Uttara kannada: ತನ್ನ ಪತ್ನಿಗೆ ಇಷ್ಟವಾಗುವ ಸೀರೆ ಇಲ್ಲ ಅಂದ ಅಂಗಡಿ ಸಿಬ್ಬಂದಿಗೆ ಥಳಿಸಿದ ಪತಿ

ಮಂಗಳೂರಿನ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ. ಕುಡುಪು ಕೊಂಚಾಡಿ ನಿವಾಸಿ ಮೋಹಿತ್‌ ಪೂಜಾರಿ (26) ಎಂಬಾತನೇ ಮೃತ ವ್ಯಕ್ತಿ. ಇವರು ಶಿವ ಎಂಡ್‌ ಡೆಕೊರೇಟರ್ಸ್‌ ಮಾಲಕ ಚಂದ್ರಶೇಖರ್‌ ಅವರ ಮನೆಯಲ್ಲಿ ಹದಿನೈದು ದಿನಗಳಿಂದ ಪೈಂಟಿಂಗ್‌ ಕೆಲಸ ಮಾಡುತ್ತಿದ್ದರು. ಫೆ.24 ರಂದು ಎರಡನೇ ಮಹಡಿಯಲ್ಲಿ ಹೊರಾಗದ ಗೋಡೆಗೆ ಪೈಂಟ್‌ ಕೆಲಸ ಮಾಡುತ್ತಿದ್ದ ದೀಪಕ್‌ ಮತ್ತು ಮೋಹಿತ್‌ ಅವರ ಏಣಿ ಜಾರಿ ಹೊರಕ್ಕೆ ಬಿದ್ದಿದೆ. ಮೋಹಿತ್‌ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕೊಂಡೊಯ್ಯುವ ಮೊದಲೇ ಅವರು ಮೃತ ಹೊಂದಿರುವುದಾಗಿ ವರದಿಯಾಗಿದೆ.

ಏಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸಾವು ಸಂಭವಿಸಿದೆ ಎಂದು ಮೋಹಿತ್‌ ಅವರ ಸೋದರ ಮಾವ ಕಂಕನಡಿ ನಗರ ಠಾಣೆಗೆ ದೂರು ನೀಡಿದ್ದು, ಸಾವಿನಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಯುಡಿಆರ್‌ ಕೇಸು ದಾಖಲಾಗಿದೆ.

Leave A Reply

Your email address will not be published.