School Teacher: 35 ರೂಪಾಯಿ ಕಳೆದುಕೊಂಡದ್ದಕ್ಕೆ, 122 ಮಕ್ಕಳಿಂದ ಪ್ರಮಾಣ ಮಾಡಿಸಿದ ಶಿಕ್ಷಕಿ

ಶಾಲೆಯಲ್ಲಿ ಶಿಕ್ಷಕಿಯ ಪರ್ಸ್ ನಲ್ಲಿ 35 ರೂಪಾಯಿ ಕಾಣೆಯಾಗಿದೆ ಎಂಬ ಕಾರಣಕ್ಕೆ ಇಡೀ ಶಾಲಾ ಮಕ್ಕಳನ್ನೆಲ್ಲ ದೇವರ ಬಳಿ ಕರೆದೊಯ್ದು ಪ್ರಮಾಣ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಈ ಘಟನೆ ಬಂಕಾ ಜಿಲ್ಲೆಯ ರಜಾನ್ ಬ್ಲಾಕ್‌ನ ಅಸ್ಮಾನಿಚಕ್ ನ ಶಾಲೆಯಲ್ಲಿ ನಡೆದಿದೆ. ವಿಷಯ ಏನೆಂದರೆ, ಶಿಕ್ಷಕಿ ವಿದ್ಯಾರ್ಥಿನಿಯೊಬ್ಬಳಿಗೆ ತನ್ನ ಬ್ಯಾಗಿನಿಂದ ಕುಡಿಯುವ ನೀರನ್ನು ತರಲು ಹೇಳಿದ್ದಾರೆ. ನಂತರ ಬ್ಯಾಗ್ ಅನ್ನು ಶಿಕ್ಷಕಿ ತನ್ನ ಪರ್ಸ್ ಅನ್ನು ಪರಿಶೀಲಿಸಿದಾಗ 35 ರೂ ಹಣ ಕಾಣೆಯಾಗಿದೆ ಎಂದು ತಿಳಿದಿದೆ. ಈ ಕಾರಣದಿಂದ ಶಿಕ್ಷಕಿ ನೀತು ಕುಮಾರಿ 122 ಮಂದಿ ಮಕ್ಕಳನ್ನು ದೇವರ ಬಳಿ ಕರೆದುಕೊಂಡು ಹೋಗಿ ಪ್ರಮಾಣ ಮಾಡಿಸಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಶಾಲೆ ಗೆ ಬಂದು ಗಲಾಟೆ ಮಾಡಿದ್ದಾರೆ.

ಶಿಕ್ಷಕಿಯ ವರ್ಗ

ಶಿಕ್ಷಕಿಯ ಈ ನಡೆಯನ್ನು ಖಂಡಿಸಿದ ಗ್ರಾಮಸ್ಥರು ಶಿಕ್ಷಣಾಧಿಕಾರಿ ಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಲಾಕ್ ಶಿಕ್ಷಣಾಧಿಕಾರಿ ಕುಮಾರ್ ಪಂಕಜ್ ಶಿಕ್ಷಕಿಯನ್ನು ವರ್ಗ ಮಾಡುವುದಾಗಿ ಹೇಳಿದ್ದಾರೆ.

ಸಮರ್ಥನೆ ನೀಡಿದ ಶಿಕ್ಷಕಿ

ಇದರ ಬಗ್ಗೆ ಮಾತನಾಡಿರುವ ನೀತು ನಾನು ಈ ಹಳ್ಳಿಗೆ 18 ವರ್ಷ ಸೇವೆ ಸಲ್ಲಿಸಿದ್ದೇನೆ. ಮಕ್ಕಳೇ ಸ್ವಯಂ ಪ್ರೇರಣೆ ಇಂದ ದೇವಸ್ತಾನಕ್ಕೆ ಬಂದರು. ಆದರೆ ಗ್ರಾಮಸ್ಥರು ತಪ್ಪು ತಿಳಿದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯೆಯಾಗಿ, ನೀತು ಕುಮಾರಿ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಕಾಣೆಯಾದ ಹಣದ ಬಗ್ಗೆ ತಾನು ಸರಳವಾಗಿ ಕೇಳಿದ್ದೇನೆ ಮತ್ತು ಅವರು ಸ್ವಯಂಪ್ರೇರಣೆಯಿಂದ ದೇವತೆಗಳ ಮುಂದೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬಂದರು ಎಂದು ಹೇಳಿದ್ದಾರೆ. ಅವಳು ಹಳ್ಳಿಗರ ಗಲಾಟೆಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿ, ಶಾಲೆಯಲ್ಲಿ ತನ್ನ 18 ವರ್ಷಗಳ ಸೇವಾವಧಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದರ ಬಗ್ಗೆ ಸ್ಥಳೀಯ ಮುಖಂಡರಾದ ಅನುಪಮ ಕುಮಾರಿ ನೀತು ವರ್ತನೆಯನ್ನು ಖಂಡಿಸಿ. ಶನಿವಾರ ಶಿಕ್ಷಕರು ಹಾಗೂ ಪೋಷಕರ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.