Kerala: ಗಂಡು ಮಗು ಬೇಕಂದ್ರೆ ಏನು ಮಾಡಬೇಕೆಂದು ಫಸ್ಟ್ ನೈಟ್ ಅಲ್ಲಿ ಗಂಡನಿಗೆ ಟಿಪ್ಸ್ ಹೇಳಕೊಟ್ಟ ಅತ್ತೆ – ಕೋರ್ಟ್ ಮೆಟ್ಟಿಲೇರಿದ ಸೊಸೆ !!

Kerala :ಕಾಲ ಬದಲಾದರೂ ಇಂದಿಗೂ ಅನೇಕರು ಗಂಡು ಮಗುವೇ ಬೇಕು, ಹೆಣ್ಣು ಬೇಡವೆಂದು ಬಯಸುವವರಿದ್ದಾರೆ. ಮಗು ಹುಟ್ಟುವ ಮೊದಲು ಅದು ಗಂಡೋ, ಹೆಣ್ಣೋ ಎಂದು ಚೆಕ್ ಮಾಡಿಸುತ್ತಾರೆ. ಇಂತಹವರ ನಡುವೆ ಇಲ್ಲೊಬ್ಬಳು ತಾಯಿ ಗಂಡು ಮಗು ಹುಟ್ಟಬೇಕಾದರೆ ಹೀಗೆ ಮಾಡು ಎಂದು ತನ್ನ ಮಗನಿಗೆ ಫಸ್ಟ್ ನೈಟ್(First night)ಟಿಪ್ಸ್ ಹೇಳಿಕೊಟ್ಟಿದ್ದಾಳ ಇದರಿಂದ ನೊಂದ ಸೊಸೆ ಕೋರ್ಟ್ ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ: Gmail: ಆಗಸ್ಟ್ನಲ್ಲಿ ಜೀಮೇಲ್ ಸ್ಥಗಿತ! : ಗೂಗಲ್ ಹೇಳಿದ್ದೇನು?

ಹೌದು, ಕೇರಳದ(Kerala) ಕೊಚ್ಚಿಯಲ್ಲಿ ಇಂತಹ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯ ಮೊದಲ ರಾತ್ರಿಯಂದೇ ಒಳ್ಳೆಯ ಗಂಡು ಮಗುವನ್ನು ಪಡೆಯಲು ವಿಚಿತ್ರ ಸಲಹೆ ನೀಡಿದ ಅತ್ತೆಯ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಿ ಮಹಿಳೆಯೊಬ್ಬಳು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ವಿಚಿತ್ರ ಅಂದರೆ 2012ರಲ್ಲಿ ಈ ಮದುವೆ ನಡೆದಿದೆ. ಅದೇ ವೇಳೆ ಈ ಘಟನೆಯೂ ಸಂಭವಿಸಿದೆ. ಹೀಗಾಗಿ ಮಹಿಳೆಯು ಗಂಡು ಮಗುವಾಗಲು ಲೈಂಗಿಕ ಸಂಭೋಗದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಮದುವೆಯಾದ ಮೊದಲ ರಾತ್ರಿಯಂದೇ ಅತ್ತೆ ಮತ್ತು ಮಾವ ನನಗೆ ತಿಳಿಸಿದರು. ಲೈಂಗಿಕತೆಯ ಸೂಕ್ತ ವಿಧಾನ ಮತ್ತು ಸಮಯವನ್ನು ವಿವರಿಸಿದರು. ಅಲ್ಲದೆ, ಹೆಣ್ಣು ಮಗು ಜನಿಸಿದರೆ ನೀನೆ ಹೊಣೆ ಎಂದು ಹೇಳಿದರು. ಆ ಸಮಯದಲ್ಲಿ ನಾನು ನವವಿವಾಹಿತೆ ಆಗಿದ್ದರಿಂದ ಇದರ ವಿರುದ್ಧ ಮಾತನಾಡುವದಾಗಲಿ, ಧ್ವನಿಯೆತ್ತುವುದಾಗಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಅರ್ಜಿಯಲ್ಲಿ ತಿಳಿಸಿದ್ದಾಳೆ.

ಇದಾದಬಳಿಕ ಅರ್ಜಿದಾರರಳು ಆಗ ತನ್ನ ಪತಿಯೊಂದಿಗೆ ಲಂಡನ್‌ನಲ್ಲಿದ್ದರು. ಅವಳು ಗರ್ಭಿಣಿಯಾದಾಗ ಮನೆಗೆ ಮರಳಿದಳು. 2014ರಲ್ಲಿ ಆಕೆಗೆ ಹೆಣ್ಣು ಮಗು ಜನಿಸಿತು. ಬಳಿಕ ಆಕೆಯ ಪತಿ ಹಾಗೂ ಕುಟುಂಬದವರಿಂದ ಆಕೆಯ ಮೇಲೆ ದೌರ್ಜನ್ಯ ಹೆಚ್ಚಾಯಿತು. ಇದರ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಲ್ಲದೆ ಪ್ರಸವಪೂರ್ವ ರೋಗನಿರ್ಣಯ ವಿಭಾಗದ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಗೆ ದೂರು ನೀಡಿದರೂ ಅವರು ನನ್ನ ಪತಿ, ಅತ್ತೆ ಮತ್ತು ಮಾವನ ವಿರುದ್ಧದ ದೂರಿನ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೊಲ್ಲಂ ನಿವಾಸಿಯಾಗಿರುವ 39 ವರ್ಷ ವಯಸ್ಸಿನ ಸಂತ್ರಸ್ತೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Leave A Reply

Your email address will not be published.