Tulsi Leaves Color: ತುಳಸಿ ಎಲೆ ಕಪ್ಪಾದರೆ ನಿಮ್ಮ ಜೀವನದಲ್ಲಿ ಇದೆಲ್ಲ ಸಂಭವಿಸುತ್ತೆ

ತುಳಸಿಯನ್ನು ಮಹಿಳೆಯರು ದೇವರು ಎಂದು ನಂಬುತ್ತಾರೆ. ಪ್ರತಿ ದಿನ ಪೂಜೆಯನ್ನೂ ಸಲ್ಲಿಸುತ್ತಾರೆ. ಒಂದು ವೇಳೆ ನಾವು ಪ್ರತಿ ದಿನ ಪೂಜಿಸುವ ತುಳಸಿ ಕಪ್ಪಾಗಳು ಕಾರಣವೇನು? ಎಂಬುದನ್ನ ಈ ಕೆಳಗಿನಂತೆ ತಿಳಿಯೋಣ.

ಇದನ್ನೂ ಓದಿ: 7th Pay Commission: ಸರಕಾರಿ ನೌಕರರೇ ಗಮನಿಸಿ, ತುಟ್ಟಿ ಭತ್ಯೆ ಜೊತೆಗೆ ಟಿಎ-ಎಚ್‌ಆರ್‌ಎ ಪರಿಷ್ಕರಣೆ?

ತುಳಸಿ ಎಂಬುದು ಪ್ರಾಚೀನ ಕಾಲದಿಂದಲೂ ಹೆಚ್ಚು ಮಹತ್ವವನ್ನು ಹೊಂದಿರುವ ಹಾಗೂ ಔಷಧಿಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಈ ಸಸ್ಯ ಇರುವಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ನೆಲೆಯುರುತ್ತವೆ ಎಂಬುದರಿಂದ ಮನೆಯ ಮುಂದೆ ತುಳಸಿಯನ್ನು ಬೆಳೆಸುತ್ತಾರೆ

ಈ ಗಿಡದಲ್ಲಿ ಸಂಭವಿಸುವ ಪ್ರತಿಯೊಂದು ಬದಲಾವಣೆಯು ನಮ್ಮ ದಿನನಿತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಗಿಡ ಸಾಯುವುದು ಮತ್ತು ಎಲೆ ಉದುರಿ ಹೋಗುವುದು ಸಾದ ನಡೆಯುವ ಪ್ರಕ್ರಿಯೆ.

ಅಧಿಕ ನೀರು ಕಡಿಮೆ ನೀರು;

ತುಳಸಿ ಹೆಚ್ಚು ನೀರನ್ನ ಬಯಸುವುದಿಲ್ಲ. ನೀವು ಅತಿಯಾದ ನೀರನ್ನು ಹಾಕಿದರೆ ಅದರ ಬೇರುಗಳು ಕೊಳೆಯುತ್ತದೆ. ನಂತರ ಸಸಿ ಒಣಗಿ ಎಲೆ ಉದುರುತ್ತವೆ.

ಕೀಟಗಳ ಭಾದೆ;

ವಿಜ್ಞಾನ ಪ್ರಕಾರ ತುಳಸಿ ಎಲೆ ಹಾಳಾಗಲು ಕಾರಣ ಸೂಕ್ಷ್ಮ ಜೀವಿಗಳು ಹಾಗೂ ಕೀಟಗಳು. ಇವುಗಳು ತುಳಸಿಯ ಎಲೆಯ ರಸವನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ. ಇದರಿಂದ ಎಲೆ ಕಪ್ಪಾಗಬಹುದು. ಬಿಸಿಲಿಗೂ ಕಪ್ಪಾಗುವುದು ಸಾಧ್ಯತೆ ಇದೆ.

ಪೋಷಕಾಂಶಗಳ ಆಲಭ್ಯತೆ;

ಒಂದು ಸಸ್ಯ ಉತ್ತಮವಾಗಿ ಬೆಳೆಯಲು ಒಳ್ಳೆಯ ಪೋಷಕಾಂಶಗಳು ದೊರೆಯಬೇಕು. ಇಲ್ಲದಿದ್ದರೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗೇ ತುಳಸಿಯು ಸಹ ಒಳ್ಳೆಯ ಗೊಬ್ಬರ ಇಲ್ಲದೆ ಹೋದರೆ ಎಲೆಗಳು ಕಪ್ಪಾಗುತ್ತದೆ. ಜೊತೆಗೆ ಹಳದಿ ಯ ಬಣ್ಣಕ್ಕೆ ಉದುರುತ್ತವೆ. ಕೆಲ ಬಾರಿ ತುಳಸಿಗೆ ರೋಗ ಸಹ ಬರುತ್ತದೆ.

ತುಳಸಿ ಎಲೆ ಚೆನ್ನಾಗಿರಲು ಏನು ಮಾಡಬೇಕು.

ತುಳಸಿಯನ್ನು ಬೆಳಗ್ಗೆ ಮತ್ತು ಸಂಜೆ ಒಂದಷ್ಟು ಸಮಯ ಬಿಸಿಲಿಗೆ ನೀಡಿ. ಸರಿಯಾಗಿ ನೀರು ಹುಣಿಸಿ. ಹೆಚ್ಚು ತೇವಾಂಶ ಇರದಂತೆ ನೋಡಿಕೊಳ್ಳಿ. ಔಷಧ ಗಳನ್ನು ಬಳಸುವುದು ಉತ್ತಮ. ಹೀಗೆ ತುಳಸಿ ಗಿಡವನ್ನು ಆರೋಗ್ಯಕರವಾಗಿ ಇಡಲು ಈ ಕ್ರಮಗಳನ್ನು ಅನುಸರಿಸಿ

2 Comments
  1. tlovertonet says

    My programmer is trying to persuade me to move to .net from PHP. I have always disliked the idea because of the expenses. But he’s tryiong none the less. I’ve been using Movable-type on a number of websites for about a year and am worried about switching to another platform. I have heard great things about blogengine.net. Is there a way I can transfer all my wordpress content into it? Any help would be really appreciated!

  2. Great post, you have pointed out some wonderful points, I also think this s a very wonderful website.

Leave A Reply

Your email address will not be published.