Puttur: ಶ್ರೀ ಕ್ಷೇತ್ರ ನಳೀಲು :ಪತಿಯ ಸಂಕಲ್ಪವನ್ನು ಈಡೇರಿಸಿದ ಪತ್ನಿ

ಪುತ್ತೂರು: ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶ್ರೀ ದೇವರಿಗೆ ಚಿನ್ನದ ಕವಚವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಅವರ ಪತ್ನಿ ಡಾ.ವೀಣಾ ಸಂತೋಷ್ ರೈ ಸಮರ್ಪಿಸಿದ್ದಾರೆ. ಪತಿಯ ಆಶಯದಂತೆ ಈ ಸೇವೆ ನೀಡಲಾಗಿದೆ.

 

ಇದನ್ನೂ ಓದಿ: Puttur: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ!! ತ್ಯಾಗ,ಸೇವೆಗೆ ಭಗವಂತನ ಅನುಗ್ರಹ- ಮಾಣಿಲ ಶ್ರೀ

ಸೇವೆಯನ್ನು ಬುಧವಾರ ಸಂತೋಷ್ ಕುಮಾರ್ ರೈ ಅವರು ಪತ್ನಿ ಮಗಳು ಸಮೇತರಾಗಿ ಶ್ರೀ ದೇವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತ್ನಿ ನಮ್ಮ ಮದುವೆಯಾದ ಸಂದರ್ಭದಲ್ಲಿ ಇದೊಂದು ಸಣ್ಣ ದೇವಸ್ಥಾನವಾಗಿತ್ತು. ಬಳಿಕದ ದಿನಗಳಲ್ಲಿ ಇಲ್ಲಿ ಅಭಿವೃದ್ದಿಯಾಗುತ್ತಲೇ ಬಂದಿದೆ. ನನ್ನ ಪತಿಯು ಭಕ್ತರನ್ನು ಒಗ್ಗೂಡಿಸಿಕೊಂಡು ದೇವಸ್ಥಾನದ ಅಭಿವೃದ್ದಿ ಮಾಡುತ್ತಾ ಪ್ರಸಕ್ತ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲ ಇದ್ದೇವೆ. ಶ್ರೀ ಸುಬ್ರಹ್ಮಣ್ಯ ದೇವರು ನಮ್ಮ ಇಷ್ಠಾರ್ಥಗಳನ್ನು ಇಡೇರಿಸುತ್ತಾ ಬಂದಿದೆ. ಈ ನಡುವೆ ನಮ್ಮ ಪತಿಯು ದೇವರಿಗೆ ಚಿನ್ನದ ಕವಚ ನೀಡುವ ತನಕ ತಾನು ಚಿನ್ನ ಧರಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಂಡಿದ್ದರು. ಪತಿಯು ಮದುವೆಯಾದ ಬಳಿಕ ನನಗೆ ಶಿಕ್ಷಣ ನೀಡಿ ಇಷ್ಟು ಎತ್ತರಕ್ಕೆ ಬಳೆಯಲು ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರು ಸಂಕಲ್ಪದAತೆ ನನ್ನ ಸ್ವಂತ ಹಣದಿಂದ ಚಿನ್ನದ ಕವಚವನ್ನು ದೇವರಿಗೆ ಸಮರ್ಪಿಸಿದ್ದೇವೆ. ಅಲ್ಲದೆ ಪತಿಗೆ ಚಿನ್ನದ ಸರವನ್ನು ನೀಡಿದ್ದೇನೆ ಎಂದರು.

ಸಂತೋಷ್ ಕುಮಾರ್ ರೈ ಅವರ ತಾಯಿ ಗಿರಿಜಾ ರೈ ನಳೀಲು ಅವರು ದೇವರಿಗೆ ಚಿನ್ನದ ಮೋಹನ‌ ಮಾಲೆ ಸಮರ್ಪಿಸಿದರು.

Leave A Reply

Your email address will not be published.