Viral video: ಆನೆಯೊಂದಿಗೆ ಫೋಟೋ ತೆಗೆಸಲು ಹೋದ ಯುವತಿ – ಎತ್ತಿ ಬಿಸಾಡಿದ ಆನೆ, ವಿಡಿಯೋ ವೈರಲ್!!

Share the Article

Viral video: ಯುವತಿಯೊಬ್ಬಳು ಆನೆಯ ಜೊತೆ ಪೋಟೋ ತೆಗೆಸಲು ಮುಂದಾಗಿದ್ದು, ಆಕೆ ಹತ್ತಿರ ಬರುತ್ತಿದ್ದಂತೆ ಆನೆಯು ಅವಳನ್ನು ಎತ್ತಿ ಬಿಸಾಡಿದ ಪ್ರಸಂಗವೊಂದುನಡೆದಿದ್ದು, ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್(Viral video ) ಆಗುತ್ತಿದೆ.

ಇದನ್ನೂ ಓದಿ: Congress guarantees : ಲೋಕಸಭಾ ಚುನಾವಣೆ ಬಳಿಕ ಇವರೆಲ್ಲರ ಗ್ಯಾರಂಟಿ ಯೋಜನೆ ಬಂದ್ ?!

ಹೌದು, ಸಾಕಿದ ಆನೆಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದಂದರೆ ಅನೇಕರಿಗೆ ಬಲು ಪ್ರೀತಿ. ಹೀಗಾಗಿ ವಿವಿಧ ಬಂದಿಯ ಪೋಸ್ ಗಳನ್ನು ಕೊಟ್ಟು ಆನೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಆನೆಗಳು ಅವರನ್ನು ತಳ್ಳುವುದು, ನೂಕುವುದು, ಮುದ್ದಿಸುವುದು ಮಾಡಿ ಹಾಸ್ಯ ಸನ್ನಿವೇಶವನ್ನು ಕ್ರಿಯೇಟ್ ಮಾಡುತ್ತದೆ. ಅಂತೆಯೇ ಇಲ್ಲೊಂದೆಡೆ ಆನೆ ಪಕ್ಕಕ್ಕೆ ಹೋಗಿ ಪೋಸ್ ಕೊಟ್ಟ ಯುವತಿಯೆನ್ನು ಆನೆ ಎತ್ತೆಸೆದ ಘಟನೆ ನಡೆದಿದೆ.

https://x.com/PicturesFoIder/status/1760371589613273522?t=I_-FK9NKn21Gyx_gYCDOOg&s=08

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಸಾಕಾನೆಗಳ ಶಿಬಿರಕ್ಕೆ ತೆರಳಿದ ಯುವತಿ ಹಾಗೂ ಇತರರು ಆನೆಯ ವಿಡಿಯೋ ಮಾಡಲು ಮುಂದಾಗಿದ್ದಾರೆ. ದ್ವಿಚಕ್ರ ವಾಹನದಿಂದ ಇಳಿದ ಯುವತಿ ನೇರವಾಗಿ ಆನೆಯ ಬಳಿ ತೆರಳಿದ್ದಾರೆ. ಇತ್ತ ಆನೆ ಗರಿಗಳನ್ನು ತಿನ್ನುತ್ತಿತ್ತು. ತಿನ್ನುತ್ತಿದ್ದ ಆನೆ ಏಕಾಏಕಿ ತಲೆ ಎತ್ತಿ ಯುವತಿ ಮೇಲೆ ದಾಳಿ ಮಾಡಿದೆ. ಆನೆಯ ದಾಳಿಗೆ ಯುವತಿ ಮಾರುದ್ದ ದೂರ ಹೋಗಿ ಬಿದ್ದಿದ್ದಾಳೆ. ಯುವತಿ ಬಿದ್ದ ಬಿನ್ನಲ್ಲೆ ಆನೆ ಕೂಡ ಗಾಬರಿಗೊಂಡಿದೆ. ಅದೃಷ್ಠವಶಾತ್ ಮತ್ತೆ ದಾಳಿ ಮಾಡಿಲ್ಲ. ಇತ್ತ ಯುವತಿ ಬಿದ್ದಲ್ಲಿಂದ ಎದ್ದು ದೂರಕ್ಕೆ ಓಡಿದ್ದಾಳೆ.

Leave A Reply

Your email address will not be published.